ಗುರುಬಸವ ಪಟ್ಟದ್ದೇವರಿಗೆ ಅಭಿನಂದನೆ 12ಕ್ಕೆ

Gurubasava Pattaddevaru
Published on

ಬೀದರ್: ತಾಲ್ಲೂಕಿನ ಚಾಂಬೋಳ್ ಗ್ರಾಮದ ರುದ್ರಮುನಿ ಪಟ್ಟದ್ದೇವರು ವಿದ್ಯಾ ಸಂಸ್ಥೆ ಆವರಣದಲ್ಲಿ ಫೆ. 12 ರಂದು ಸಂಜೆ 6ಕ್ಕೆ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸಂಯಮ ಪ್ರಶಸ್ತಿ ಪುರಸ್ಕøತ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರಿಗೆ ಅಭಿನಂದನೆ, ವೀರಭದ್ರೇಶ್ವರ ಪ್ರೌಢಶಾಲೆ ಹಾಗೂ ಶ್ರೀಮತಿ ನೀಲಮ್ಮ ತಾಯಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಂಸ್ಥೆಯ ಅಧ್ಯಕ್ಷ ರುದ್ರಮುನಿ ಪಟ್ಟದ್ದೇವರು ಸಾನಿಧ್ಯ ವಹಿಸುವರು. ಶಾಸಕ ರಹೀಂಖಾನ್ ಉದ್ಘಾಟಿಸುವರು. ಡಾ. ಅಮರನಾಥ ಪಾಟೀಲ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಪ್ರಮುಖರಾದ ಚನ್ನಬಸಪ್ಪ ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಸಂಸ್ಥೆಯ ನಿರ್ದೇಶಕ ಪ್ರಕಾಶ ಕುಲಕರ್ಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net