ಗುರುಪರಂಪರೆಗೆ ಶ್ರೀ ವೀರಸೋಮೇಶ್ವರ ಜಗದ್ಗುರು ಕಳಸಪ್ರಾಯ

9 ckm 6
ಚಿಕ್ಕಮಗಳೂರಿನ ಸುವರ್ಣಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತಿç ಸಭಾಂಗಣದಲ್ಲಿ ಜಂಗಮ ಬಳಗ, ಶ್ರೀದೇವಿ ಗುರುಕುಲ ಹಾಗೂ ಶ್ರೀ ಪಾರ್ವತಿ ಮಹಿಳಾ ಮಂಡಳಿ ಆಯೋಜಿಸಿದ್ದ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ೬೯ನೆಯ ಜನ್ಮದಿನೋತ್ಸವ ಆಚರಿಸಲಾಯಿತು. ಕೋಟ ಶ್ರೀನಿವಾಸ ಪೂಜಾರಿ, ಎಂ.ಆರ್.ದೇವರಾಜ ಶೆಟ್ಟಿ, ಪ್ರಭುಲಿಂಗಶಾಸ್ತಿç ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಗುರುಪರಂಪರೆಗೆ ಪ್ರಸ್ತುತ ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಜಗದ್ಗುರುಗಳು ಕಳಸಪ್ರಾಯ ಎಂದು ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸಪೂಜಾರಿ ಅಭಿಪ್ರಾಯಪಟ್ಟರು.

ನಗರದ ಸುವರ್ಣಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತಿç ಸಭಾಂಗಣದಲ್ಲಿ ಜಂಗಮ ಬಳಗ, ಶ್ರೀದೇವಿ ಗುರುಕುಲ ಹಾಗೂ ಶ್ರೀ ಪಾರ್ವತಿ ಮಹಿಳಾ ಮಂಡಳಿ ಆಯೋಜಿಸಿದ್ದ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ೬೯ನೆಯ ಜನ್ಮದಿನೋತ್ಸವ ಉದ್ಘಾಟಿಸಿ ಮಾತನಾಡಿದರು.

ಗುರುಪರಂಪರೆ, ಗುರುಪೀಠಗಳಿಗೆ ನಮ್ಮ ಸಮಾಜದಲ್ಲಿ ಅತ್ಯಂತ ಪ್ರೀತಿ-ಗೌರವ ಇದೆ. ಸಮಾಜಕ್ಕೆ ಸತ್‌ಪ್ರೇರಣೆ ನೀಡಿ ಸನ್ಮಾರ್ಗ ತೋರುವ ಶಕ್ತಿ ಪೂಜ್ಯರಿಗಿದೆ. ಜಾತಿ, ಮತ, ಭಿನ್ನಬೇಧಗಳಿಲ್ಲದೆ ಎಲ್ಲರಿಗೂ ಒಳಿತನ್ನು ಬಯಸುವ ಆಶೀರ್ವಾದ ರಂಭಾಪುರಿ ಜಗದ್ಗುರುಗಳು ನೀಡುತ್ತಾ ಬಂದಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ತಾವು ಪೂಜ್ಯರನ್ನು ಭೇಟಿ ಮಾಡಿದಾಗ ನಿನಗೆ ಒಳ್ಳೆಯದಾಗಲಿ. ಅದಕ್ಕಿಂತ ಮುಖ್ಯವಾಗಿ ದೇಶಕ್ಕೆ ಒಳೆÀ್ಳಯದಾಗಬೇಕು ಎಂದು ಅಪ್ಪಣೆ ಕೊಡಿಸಿದ್ದರೆಂದು ಸ್ಮರಿಸಿದರು.

ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಆತಂಕವಾಗುತ್ತದೆ. ನಮ್ಮ ಮುಂದಿನ ತಲೆಮಾರಿನ ಬದುಕು ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಬೇಕಾದರೆ ಇಂತಹ ಗುರುಪೀಠಗಳ ಮಾರ್ಗದರ್ಶನದ ಅನಿವಾರ್ಯತೆ ಅರ್ಥವಾಗುತ್ತದೆ. ಮಕ್ಕಳಿಗೆ ಗುರುಕುಲದ ಒಳ್ಳೆಯ ಶಿಕ್ಷಣ ನೀಡಿದರೆ ಭವಿಷ್ಯಕ್ಕೆ ಒಳಿತಿದೆ ಎಂದರು.

ಮಂಗಳೂರಿನ ಶ್ರೀಮಂತ ಕುಟುಂಬದ ಏಕೈಕ ಪುತ್ರ ದೇಶ ಸೇವೆಯ ಹಂಬಲದಿAದ ಸೈನ್ಯಸೇರಿ ಪಾಕ್‌ಗಡಿ ಕಾಯುವಾಗ ಉಗ್ರರ ಬಾಂಬ್ ದಾಳಿಗೆ ತುತ್ತಾಗಿ ಜೀವಬಿಡುತ್ತಾನೆ. ದೇಶ ಭಕ್ತನ ಶವ ಕಾಶ್ಮೀರದಿಂದ ಕರ್ನಾಟಕಕ್ಕೆ ಬರುವ ಸಂದರ್ಭದಲ್ಲೆ ಕರ್ನಾಟಕದ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲಿ ಪಾಕ್‌ಪರ ಘೋಷಣೆ ಮೊಳಗುತ್ತದೆ ಎಂದರೆ ನಾವು ಎತ್ತ ಸಾಗುತ್ತಿz್ದೆÃವೆ ಎಂಬ ಚಿಂತೆ ಕಾಡುತ್ತದೆ. ದೇಶಭಕ್ತನ ತಾಯಿ ಯಾರಿಗಾಗಿ ನನ್ನ ಮಗ ಪ್ರಾಣಬಿಟ್ಟ ಎಂಬ ಚುಟುಕು ಬರೆದು ಸಂಕಟ ಹೊರ ಹಾಕುತ್ತಾಳೆ. ಇದನ್ನು ಓದಿದ ಲೇಖಕನೊಬ್ಬ ಕೆಟ್ಟಮನಸ್ಥಿತಿಯವರಿಗೆ ನಾವೆಂತಹ ಶಿಕ್ಷಣ ನೀಡಿz್ದÉÃವೆ ಎಂಬ ಪ್ರಶ್ನೆ ಹಾಕುತ್ತಾನೆ. ಸ್ವಾರ್ಥಕ್ಕಿಂತ ದೇಶ ಮೊದಲು ಎಂಬ ರಂಭಾಪುರಿ ಜಗದ್ಗುರುಗಳ ಸಂದೇಶ ನಮಗೆಲ್ಲ ಪಾಠವಾಗಬೇಕು ಎಂದರು.

ಸಮಾರAಭದ ಅಧ್ಯಕ್ಷತೆಯನ್ನು ಜಂಗಮ ಬಳಗದ ಸಂಚಾಲಕ ಪ್ರಭುಲಿಂಗಶಾಸ್ತಿç ವಹಿಸಿದ್ದರು. ಶ್ರೀದೇವಿ ಗುರುಕುಲದ ಸಂಸ್ಥಾಪಕ ವಿದ್ವಾನ್ ಡಾ.ದಯಾನಂದಮೂರ್ತಿಶಾಸ್ತಿç , ಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾ ಶಾಸ್ತಿç, ಕಾರ್ಯದರ್ಶಿ ಭವಾನಿ ವಿಜಯಾನಂದ, ಅಥಣಿಯ ಪುರೋಹಿತ ವೇ.ಮೂ.ಪ್ರವೀಣಶಾಸ್ತಿç , ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net