

ಗುರುಗುಂಟಾ: ಗ್ರಾಮದಲ್ಲಿ ಅಯ್ಯಪ್ಪಸ್ವಾಮಿ 26ನೇ ವರ್ಷದ ಮಹಾಮಂಡಲ ಪೂಜೆ ಗುರುವಾರ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಅಯ್ಯಪ್ಪಯ್ಯಸ್ವಾಮಿಯ ಬೃಹತ್ ಭಾವಚಿತ್ರವನ್ನು ಸರ್ವಾಲಂಕೃತಗೊಂಡ ತೆರೆದ ವಾಹನದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿನ ಉಟಕನೂರು ತಾತನ ಗದ್ದುಗೆಯಿಂದ ಸಕಲ ವಾದ್ಯ ಮೇಳ ಮತ್ತು ಸುಮಂಗಲೆಯರ ಕಳಸದೊಂದಿಗೆ ಹೈಸ್ಕೂಲ್ ರಸ್ತೆ, ಮರಾಠಿ ಗಲ್ಲಿ, ಮೋಮಿನ್ ಗಲ್ಲಿ, ಚಿದಾನಂದ ಗುಡಿ ರಸ್ತೆ, ಸಂತೆ ಮಾರುಕಟ್ಟೆ ರಸ್ತೆ ಮೂಲಕ ಅಯ್ಯಪ್ಪಸ್ವಾಮಿ ಪೀಠದವರೆಗೆ ಸಾಗಿತು. ಗಣಹೋಮ ಪೂಜೆ ನಡೆಯಿತು.
ಸಂಜೆ ಮಹಾಮಂಡಲ ಪೂಜೆ ಜರುಗಿತು. ಮಂಡಲ ಮಹಾಪೂಜೆಯಲ್ಲಿ ಸಂಸ್ಥಾನಿಕ ರಾಜಾಸೋಮನಾಥ ನಾಯಕ, ಗುರುಸ್ವಾಮಿಗಳಾದ ಗೋಪಾಲ ಹಟ್ಟಿ, ಪ್ರಶಾಂತ ಬೊಂದಾಡೆ, ಪ್ರವೀಣ್ ಪತ್ತಾರ್, ವೀರೇಶ ಹೊನ್ನಳ್ಳಿ, ಮಲ್ಲಿಕಾರ್ಜುನ್ ಮಾಚನೂರು ಇದ್ದರು.
ಗುರುಗುಂಟಾ, ಹೊನ್ನಳ್ಳಿ, ಮಾಚನೂರು, ಹಟ್ಟಿ, ಯತಗಲ್ ಗ್ರಾಮಗಳ ಅಯ್ಯಪ್ಪ ಮಾಲಾಧಾರಿಗಳಿಂದ ರಾತ್ರಿ ಭಜನೆ ನಡೆಯಿತು. ದಾನಿಗಳನ್ನು ಸನ್ಮಾನಿಸಲಾಯಿತು. ವಿಶ್ವನಾಥ ಶ್ರೇಷ್ಠಿ, ಡಾ.ಬರಮಣ್ಣ, ಸಿದ್ದು ಎಚ್.ಜಿ.ಎಂ., ಗ್ರಾಪಂ ಸದಸ್ಯ ಆದೇಶ ಹಡಪದ, ನಾಲ್ಕು ಯುವಕರ ಗೆಳೆಯರ ಬಳಗದಿಂದ ಅನ್ನ ಸಂತರ್ಪಣೆ ಕೈಗೊಳ್ಳಲಾಯಿತು.