

ಅಥಣಿ ಗ್ರಾಮೀಣ: ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದಾಗ ಮಾತ್ರ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ಮುತ್ತೂರಿನ ರಾಚೋಟೇಶ್ವರಮಠದ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ೨೦೦೫-೦೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಶಾಶ್ವತವಲ್ಲ. ಜ್ಞಾನ ಮೂಡಿಸಿದ ಗುರುಗಳಿಗೆ ಎಲ್ಲರೂ ಗೌರವ ಸಮರ್ಪಿಸಬೇಕು ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಎಸ್.ಬಿ.ದೊಡಮನಿ ಮಾತನಾಡಿ, ವಿದ್ಯಾರ್ಥಿಗಳು ಇಂದು ನಮ್ಮನ್ನು ಕರೆಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಯಕ್ಕಂಚಿಯ ಗುರುದೇವಾಶ್ರಮದ ಗುರುಪಾದ ಸ್ವಾಮೀಜಿ ಮಾತನಾಡಿ, ನಾವು ಏನಾದರೂ ಗಳಿಸಿದ್ದರೆ ಅದಕ್ಕೆ ಕಾರಣೀಕರ್ತರು ಗುರುಗಳು ಎಂಬುದನ್ನು ಮರೆಯದಿರಿ ಎಂದರು.
ಪಿ.ಕೆ.ಪಡತಾರೆ, ಎಸ್.ಬಿ.ದೊಡಮನಿ, ಸಿ.ಬಿ.ಹುಣಶ್ಯಾಳ, ಐ.ಜಿ.ಮಕಾನದಾರ, ಎಸ್.ಆರ್.ಮಾಲಗಾರ, ಎಂ.ವೈ.ಪೂಜಾರಿ, ಎಂ.ಎಂ.ದಾಂಡಗೆ ಸೇರಿ ಇತರ ಶಿಕ್ಷಕರನ್ನು ಸನ್ಮಾನಿಸಲಾಯಿತು.
ನಾಗಪ್ಪ ಕೆಂಚಣ್ಣವರ, ಪ್ರಮೋದ ಪತ್ತಾರ, ಶಂಕರ ನಾಯಿಕ, ಆನಂದ ಧೂಳಶೆಟ್ಟಿ, ಶಶಿಧರ ಮಾಲಗಾರ, ಅಪ್ಪು ಗುಡ್ಡಾಪುರ, ಅಕ್ಬರಲಿ ಮುಲ್ಲಾ ಇತರರಿದ್ದರು. ಅಪ್ಪಾಸಾಹೇಬ ಸನದಿ ಸ್ವಾಗತಿಸಿದರು. ಸದಾನಂದ ಮಾಡಗ್ಯಾಳ ನಿರೂಪಿಸಿದರು.