

ಬೇಲೂರು: ಮೈಸೂರು ಜಿಲ್ಲೆ ಸುತ್ತೂರು ಕ್ಷೇತ್ರದಲ್ಲಿ 2023ನೇ ಜನವರಿ 18 ರಿಂದ 23ರ ವರೆಗೆ ನಡೆಯಲಿರುವ ಆದಿಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರ ಮಹೋತ್ಸದ ಅಂಗವಾಗಿ ನಾಡಿನಾಧ್ಯಂತ ಸಂಚರಿಸುತ್ತಿರುವ ಪ್ರಚಾರ ರಥ ಬೇಲೂರಿಗೆ ಆಗಮಿಸಿದ ಸಂದರ್ಭ ಗಣ್ಯರು ಗುರುಗಳ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸ್ವಾಗತಿಸಿದರು.
ಕಸಾಪ ಮಾಜಿ ಗೌರವ ಕಾಂರ್ದರ್ಶಿ ಹೆಬ್ಬಾಳು ಹಾಲಪ್ಪ ಮಾತನಾಡಿ, ಮೈಸೂರು ಒಡೆಯರ ಕಾಲದಿಂದಲೂ ಉತ್ತಮ ಸಮಾಜ ನಿರ್ಮಾಣಕ್ಕೆ ಸುತ್ತೂರು ಮಹಾ ಸಂಸ್ಥಾನ ತನ್ನದೆ ಆದ ಕೊಡುಗೆ ನೀಡುತ್ತಾ ಬಂದಿದೆ. ಇಲ್ಲಿನ ಜಾತ್ರಾ ಮಹೋತ್ಸವವು ಪ್ರತಿ ವ?ರ್ ಜನವರಿ 18 ರಿಂದ 23ರ ವರೆಗೆ ನಡೆಯಲಿದ್ದು, ಇಲ್ಲಿ ಸಾಂಸ್ಕೃತಿಕ. ಶೈಕ್ಷಣಿಕ, ಧಾರ್ಮಿಕ ಹಾಗೂ ಪರಿಸರ ಮತ್ತು ಕೃಷಿಗೆ ಪ್ರೋತ್ಸಾಹಿಸುವ ಕೆಲಸವಾಗುತ್ತದೆ. ವಿಶೇ?ವಾಗಿ ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನದ ಆಕರ್ಷಣೀಯವಾಗಿರುತ್ತದೆ. ಮಹೋತ್ಸವದಲ್ಲಿ ದನಗಳ ಜಾತ್ರೆ, ದೇಶಿಯ ಆಟಗಳು, ದೋಣಿ ವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ ಸ್ಪರ್ಧೆ, ಸೋಬಾನೆ ಹಾಡುಗಳು, ಛಾಯಾಚಿತ್ರ ಸ್ಪರ್ಧೆ ಸೇರಿದಂತೆ ವೈವಿದ್ಯಮಯ ವರ್ಣರಂಜಿತ ಕಾರ್ಯಕ್ರಮ ನಡೆಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಪುರಸಭೆ ಸದಸ್ಯೆ ಹಾಗೂ ಕದಳಿ ಮಹಿಳಾ ವೇದಿಕೆ ರಾಜ್ಯ ಸಂಚಾಲಕಿ ತೀರ್ಥಕುಮಾರಿ ಮಾತನಾಡಿ, ಸುತ್ತೂರು ಶ್ರೀಗಳು ಬಸವಾದಿ ಶರಣರ ವಿಚಾರಗಳನ್ನು ಮನಕುಲಕ್ಕೆ ತಿಳಿಸುವ ಉದ್ದೇಶದಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿ?ತ್ತು ಸ್ಥಾಪಿಸಿದ್ದು, ರಾಜ್ಯಾಧ್ಯಂತ ವಚನ ಸಾಹಿತ್ಯ ಮತ್ತು ಶರಣರ ಬದುಕನ್ನು ಪಸರಿಸುತ್ತ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಸುತ್ತೂರು ಜಾತ್ರ ಮಹೋತ್ಸವದ ಪ್ರಚಾರ ರಥವು ಬೇಲೂರಿಗೆ ಆಗಮಿಸಿದುರುವುದು ಸ್ವಾಗತಾರ್ಹವಾಗಿದ್ದು, ಹೆಚ್ಚಿನ ಜನರು ಜಾತ್ರೆಯಲ್ಲಿ ಪಾಲ್ಗೊಳ್ಳೋಣ ಎಂದರು.
ಪ್ರಚಾರ ರಥ ಮುಖ್ಯಸ್ಥ ಪಂಚಾಕ್ಷರಿ, ತಾಲೂಕು ಕಸಾಪರಿ ಮಾಜಿ ಅಧ್ಯಕ್ಷ ಶಿವಮೂರ್ತಿ, ಗೌರವ ಕಾರ್ಯದರ್ಶಿ ಶಿವರಾಜ್, ಮಹೇಶ್, ಪ್ರಮುಖರಾದ ಮಲ್ಲೇಶ್, ಗಣೇಶ್, ಸುನೀಲ್, ರವಿಹೊಳ್ಳ ಮತ್ತು ಸೌಭಾಗ್ಯ, ಉಪನ್ಯಾಸಕ ಧನಂಜಯ್, ಎಎಸ್‌ಐ ವಿರೂಪಾಕ್ಷ ಸೇರಿದಂತೆ ಇತರರಿದ್ದರು.