ಗುರುಗಳ ತತ್ವಾದರ್ಶ ಎಲ್ಲರಿಗೂ ದಾರಿದೀಪ

22-08kodekal01
ಕೊಡೇಕಲ್‌ನ ಶ್ರೀ ವೀರಯ್ಯ ಅಪ್ಪನವರ ೫ನೇ ಪುಣ್ಯಸ್ಮರಣೆ ನಿಮಿತ್ತ ಮಂಗಳವಾರ ಗದ್ದುಗೆಗೆ ಶ್ರೀ ವೃಷಭೇಂದ್ರ ಅಪ್ಪ ಅವರ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನಡೆಯಿತು. ಪ್ರಭುಸ್ವಾಮಿ ಕೊಡೇಕಲ್ಮಠ, ಅಲ್ಲಮಪ್ರಭುಸ್ವಾಮಿ ಕೊಡೇಕಲ್ಮಠ, ಸಂಗಣ್ಣ ಮಹಲಿಮಠ, ಪ್ರಭು ಮಹಲಿನಮಠ, ಕುಮಾರಸ್ವಾಮಿ ಗುಡ್ಡೊಡಗಿ ಇತರರಿದ್ದರು.
Published on

ಕೊಡೇಕಲ್: ಭಾವೈಕ್ಯತೆಯ ಕೊಂಡಿಯಾಗಿದ್ದ ಶ್ರೀ ವೀರಯ್ಯ ಅಪ್ಪ ಅವರ ತತ್ವಾದರ್ಶ ಎಲ್ಲರಿಗೂ ದಾರಿದೀಪವಾಗಿವೆ ಎಂದು ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ನುಡಿದರು.

ಗ್ರಾಮದಲ್ಲಿ ಶ್ರೀ ವೀರಯ್ಯ ಅಪ್ಪ ಅವರ ಐದನೇ ಪುಣ್ಯಸ್ಮರಣೆ ನಿಮಿತ್ತ ಮಂಗಳವಾರ ಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸುದೀರ್ಘ ೬೩ ವರ್ಷಗಳ ಕಾಲ ಬಸವ ಪೀಠಾಧಿಪತಿಗಳಾಗಿ ಬಸವಣ್ಣವರ ತತ್ವಾದರ್ಶವನ್ನು ಮೈಗೂಡಿಸಿಕೊಂಡ ಪೂಜ್ಯರು ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಪ್ರಭುಸ್ವಾಮಿ ಕೊಡೇಕಲ್ಮಠ, ಅಲ್ಲಮಪ್ರಭುಸ್ವಾಮಿ ಕೊಡೇಕಲ್ಮಠ, ಈರಪ್ಪಯ್ಯ ಹುಣಸಿಗಿಡದ, ಐ.ಜಿ.ಕೊಡೇಕಲ್ಮಠ, ಸಂಗಣ್ಣ ಮಹಲಿನಮಠ, ಪ್ರಭು ಮಹಲಿನಮಠ, ಸಂಗಮೇಶ ಮುತ್ತಗಿ, ಪ್ರಭು ಪೂಜಾರಿ, ಮುದಕಣ್ಣ ಪೂಜಾರಿ, ಸಂಗಪ್ಪ ಶಿವಪುರ, ಬಸಣ್ಣ ಹಳೇಪೂಜಾರಿ, ಕುಮಾರಸ್ವಾಮಿ ಗುಡ್ಡೊಡಗಿ, ವಿರೇಶ ಮುತ್ತಗಿ, ಗುರುಬಸ್ಸು ಪಂಜಗಲ್, ನೀಲಕಂಠ ಕೆಂಡದ, ಬಸವರಾಜ ಹೊಸಪೂಜಾರಿ, ಬಸಪ್ಪ ಪಂಜಗಲ್, ಬಸವರಾಜ ಗೋನಟಲ್, ಶಂಕರಗೌಡ ಜೇವರ್ಗಿ, ಎಸ್.ಬಿ.ಅಡ್ಡಿ, ಚಂದ್ರಶೇಖರ ಹೋಕ್ರಾಣಿ, ಮಾನಪ್ಪ ಅಡ್ಡಿ, ಶಂಕರ ಅಂಗಡಿ, ಸಂಗಮೇಶ ಅಡ್ಡಿ, ತಿಪ್ಪಣ್ಣ ದ್ಯಾಮನಾಳ ಇದ್ದರು.

ಕೋರಿಸಂಗಯ್ಯ ಕೆಂಡದ ನಿರೂಪಣೆ ಮಾಡಿದರು. ಪ್ರಕಾಶ ಬಾಚಿಹಾಳ ಸ್ವಾಗತಿಸಿದರು. ಸಂಗನಬಸ್ಸು ಪಂಜಗಲ್ ವಂದಿಸಿದರು. ವಿವಿಧ ಕಲಾವಿದರಿಂದ ಸಂಗೀತ ಕರ‍್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net