

ಹಾಸನ : ಗುರುಕೊಟ್ಟ ಜ್ಞಾನವು ನಿರಂತರವಾಗಿ ಹರಿಯುತ್ತಲೆ ಇರುತ್ತದೆ. ಗುರುಗಿಂತ ದೊಡ್ಡವರು ಈ ಭೂಮಿ ಮೇಲೆ ಯಾರು ಇರುವುದಿಲ್ಲ. ಹಿರಿಯ ಹಾಸ್ಯ ಹಾಗೂ ಪೋಷಕ ನಟ ಎಸ್. ದೊಡ್ಡಣ್ಣ ಕಿವಿಮಾತು ಹೇಳಿದರು.
ನಗರದ ಜವವರನಹಳ್ಳಿ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪುಣ್ಯಾರಾಧನೆ ಶರಣರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಜವರನನಹಳ್ಳಿ ಮಠದ ತ್ರಿಮೂರ್ತಿ ಗುರುಗಳಾದ ಶ್ರೀ ದೊಡ್ಡ ಶಾಂತವೀರ ಶಕ್ತಿ ಶಿವಯೋಗಿಗಳ 106ನೇ , ಶ್ರೀ ಚಿಕ್ಕ ಶಾಂತವೀರ ಮಹಾಸ್ವಾಮಿಗಳ 86ನೇ ಹಾಗೂ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳ 36ನೇ ವರ್ಷದ ಪುಣ್ಯಾರಾಧನೆ ನಡೆಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತ್ರಿಮೂರ್ತಿಗಳ ಜೊತೆ ಗಣಪತಿ ಸೇರಿದ ಮೇಲೆ ಗುರುವಾಗಿದ್ದು. ನನಗೆ ಇದೆ ಶ್ರೀ ಜವೇರನಹಳ್ಳಿ ಮಠದಲ್ಲಿ ಸಂಗಮೇಶ್ವರ ಸ್ವಾಮೀಜಿಗಳು ತುತ್ತು ಅನ್ನ ಕೊಡುತ್ತಿದ್ದರು. ಈ ಅನ್ನವನ್ನು ಮರೆತರೇ ಮುಂದೆ ಯಾವ ಜನ್ಮದಲ್ಲೂ ನಮಗೆ ಅನ್ನ ಸಿಗುವುದಿಲ್ಲ. ಆಗೇ ಅಂದು ಬಡತನ ಇಂದು ಸಿರಿತನ ಬಂದಾಗ ಹಳೆಯದನ್ನು ಎಂದು ಮರೆಯಬಾರದು ಎಂದರು.
ನಂತರ ಭಾಗವಹಿಸಿದ್ದ ವಿವಿಧ ಭಾಗದ ಮಠಾಧೀಶರು ತಮ್ಮ ಹಿತಾವಚನವನ್ನು ನುಡಿದು, ಮನುಷ್ಯನಾದವನು ಸಮಾಜದಲ್ಲಿ ಹೇಗೆ ಬದುಕಬೇಕು. ಇರುವ ಜನ್ಮವನ್ನು ಹೇಗೆ ಸಾರ್ಥಕತೆ ಮಾಡಿಕೊಳ್ಳಬೇಕು. ಸೇವೆ ಮಾಡುವುದರ ಮೂಲಕ ಜನ್ಮ ತೃಪ್ತಿ ಪಡೆದುಕೊಳ್ಳುವುದು ಹೇಗೆ? ಒಬ್ಬರೂ ಮತ್ತೊಬ್ಬರನ್ನು ಹಿಂಸಿಸದೇ, ಮೋಸ ಮಾಡದೇ ತನ್ನ ಸ್ವಂತ ದುಡಿಮೆಯಲ್ಲಿ ಬದುಕಿ ತೋರಿಸುವುದರ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಲು ಸಲಹೆ ನೀಡಿದರು.
ಇದೆ ವೇಳೆ ಹಿರಿಯ ಹಾಸ್ಯ ಹಾಗೂ ಪೋಷಕ ನಟನಾದ ಎಸ್. ದೊಡ್ಡಣ್ಣ, ಬೆಂಗಳೂರು ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಟಿ.ಆರ್. ಶಿವಕುಮಾರ್, ಎನ್.ಬಿ.ಎಸ್.ಎಸ್. ನ್ಯಾಷನಲ್ ಛೇರ‌್ಮನ್ ಎಂ.ಬಿ. ಸೋಮಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ತೋಟದಾರ್ಯಮಠದ ಮುಂಡರ್ಗಿಯ ಶ್ರೀ ನಿಜಗುಣಾನಂದ ಮಹಾಸ್ವಾಮಿ ಮತ್ತು ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ ವಹಿಸಿದ್ದರು. ಇದೆ ವೇಳೆ ವಿವಿಧ ಮಠದ ಮಠಾಧೀಶ ರಾಯನಾಳ ಹುಬ್ಬಳ್ಳಿಯ ರೇವಣ್ಣ ಸಿದ್ದೇಶ್ವರ ಮಹಾಸ್ವಾಮೀಜಿ, ಧರ್ಮರಾಜೇಂದ್ರ ಮಹಾಸ್ವಾಮಿ, ಸ್ವತಂತ್ರ ಬಸವಲಿಂಗ ಶಿವಯೋಗಿ, ವಿಜಯಕುಮಾರ ಮಹಾಸ್ವಾಮಿ, ಜಯದೇವ ಮಹಾಸ್ವಾಮಿ, ಗಂಗಾಧರ್ ಶಿವಚಾರ್ಯ ಮಹಾಸ್ವಾಮಿ, ಮಹಾಂತ ಶಿವಲಿಂಗ ಮಹಾಸ್ವಾಮಿ, ಸೋಮಶೇಖರ ಶಿವಚಾರ್ಯ ಮಹಾಸ್ವಾಮಿ, ಕಲ್ಯಾಣ ಮಹಾಸ್ವಾಮಿ, ಬಸವರಾಜೇಂದ್ರ ಮಹಾಸ್ವಾಮಿ, ಮಲ್ಲೇಶ್ವರ ಮಹಾಸ್ವಾಮಿ, ಮಹಾಂತ ಮಹಾಸ್ವಾಮಿಗಳು ವಹಿಸಿದ್ದರು. ಜೊತೆಗೆ ಲಿಂಗಾಯತ ವೀರಶೈವ ಮಹಾಸಭೆ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಜವೇನಹಳ್ಳಿ ಮಠದ ಹಿತಾರಕ್ಷಣಾ ಸಮಿತಿ ಅಧ್ಯಕ್ಷ ಬಿ.ವಿ. ಉಮೇಶ್, ಉದ್ಯಮಿ ಎಸ್.ಎಚ್. ರಾಜಶೇಖರ್, ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಚ್.ಆರ್. ಹೊಂಬೇಶ್, ಬಸವ ಕೇಂದ್ರದ ಅಧ್ಯಕ್ಷ ಯು.ಎಸ್. ಬಸವರಾಜು, ವೀರಶೈವ ಯುವ ಸೇನೆಯ ಉಪಾಧ್ಯಕ್ಷ ಶರತ್ ಭೂಷಣ್, ಜಿಲ್ಲಾ ಲಿಂಗಾಯತ ವೀರಶೈವ ಸಂಘದ ಸಹಕಾರ್ಯದರ್ಶಿ ಮಯೋರಿ ಲೋಕೇಶ್, ಅವಿನಾಶ್, ಮೋಹನ್, ಮನೀಜ್, ದರ್ಶನ್, ವೇಣುಕುಮಾರ್ ಇದ್ದರು.