

ಸುರಪುರ: ತಾವು ಅಭ್ಯಾಸ ಮಾಡಿದ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳು ಹಮ್ಮಿಕೊಳ್ಳುವ ಇಂಥಹ ಕರ‍್ಯಕ್ರಮ ಗುರು ಮತ್ತು ಶಿಷ್ಯರ ಸಂಬAಧ ಗಟ್ಟಿಗೊಳಿಸುತ್ತದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಹಣಮಂತ ಹೇಳಿದರು.
ತಾಲೂಕಿನ ಬಿಜಾಸಪುರ(ಕೃಷ್ಣಾಪುರ ಕ್ಯಾಂಪ್) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಹಮ್ಮಿಕೊಂಡ ಗುರು ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೇ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಈ ಕರ‍್ಯಕ್ರಮ ಶಿಕ್ಷಕರಿಗೆ ಗೌರವ ತರುವುದಾಗಿದೆ. ಅಲ್ಲದೆ ಶಿಕ್ಷಣದ ಮಹತ್ವವನ್ನು ಸಾರಲು ಇದು ಕೂಡ ಸಹಾಯಕವಾಗಲಿದೆ ಎಂದರು.
ಗುರು-ಶಿಷ್ಯರ ಸಂಬAಧ ವಿದ್ಯಾರ್ಥಿಯ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಶಿಕ್ಷಕರು ಜ್ಞಾನ ನೀಡುವುದಲ್ಲದೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿಯೂ ಪ್ರಮುಖ ವಹಿಸುತ್ತಾರೆ. ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಗೌರವಿಸುವುದು ಮತ್ತು ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.
ಈ ವೇಳೆ ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾದ ನಾಗೇಶ.ಟಿ.ಅಪ್ಪಣ್ಣ ಹಾಗೂ ನಿವೃತ್ತ ಶಿಕ್ಷಕಿ ದೇವೇಂದ್ರಮ್ಮ ಹಾಗೂ ಹಳೆಯ ವಿದ್ಯಾರ್ಥಿ ಗಿರಿಧರ ವೈದ್ಯ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯಕ ಉಪಸ್ಥಿತರಿದ್ದರು. ಸಂತೋಷ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಲಿಂಗದಳ್ಳಿ ನಿರೂಪಿಸಿದರು. ಶಿಕ್ಷಕರಾದ ರಾಜೇಶ್ವರಿ ಗುಳೇದ ಸ್ವಾಗತಿಸಿದರು.ರೇಣುಕಾ ವಾಲಿ ವಂದಿಸಿದರು.