ಗುರು ಸಾರ್ವಭೌಮರ ಮಧ್ಯಾರಾಧನೆ ಸಂಭ್ರಮ

2108Klb06
Published on

ಕಲಬುರಗಿ: ಕಲಿಯುಗದ ಕಾಮಧೇನು, ಕಲ್ಪವೃಕ್ಷ ಶ್ರೀ ಗುರುರಾಘವೇಂದ್ರ ಸ್ವಾಮಿಗಳು ಕಷ್ಟ, ಕಾರ್ಪಣ್ಯ, ನೋವಿನಿಂದ ಬಳಲಿ ಬರುವ ಭಕ್ತರನ್ನು ಮಂತ್ರಾಲಯದ ವೃಂದಾವನದಲ್ಲಿ ನೆಲೆಸಿ ಉದ್ಧಾರ ಮಾಡುತ್ತಿದ್ದಾರೆ. ಇಂತಹ ಮಹಾಮಹಿಮ ಶ್ರೀಗುರು ರಾಘವೇಂದ್ರರ ಮಧ್ಯಾರಾಧನೆ ಜಿಲ್ಲೆಯ ವಿವಿಧ ಮಠ-ಮಂದಿರಗಳಲ್ಲಿ ಬುಧವಾರ ಶ್ರದ್ಧಾ ಭಕ್ತಿಯಿಂದ ಜರುಗಿತು. ಓಂ ಶ್ರೀ ರಾಘವೇಂದ್ರಾಯ ನಮಃ ಮಂತ್ರಾP್ಷÀರ ಜಪಿಸಲಾಯಿತು.
ಬಿz್ದÁಪುರ ಕಾಲನಿ ರಾಯರ ಮಠದಲ್ಲಿ ನಡೆದ ಮಧ್ಯಾರಾಧನೆಯಲ್ಲಿ ಉಪನ್ಯಾಸ ನೀಡಿದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಕೃಷ್ಣಾ ಕಾಕಲವಾರ, ರಾಯರು ಯಾವೊಂದು ಜಾತಿ, ಮತಕ್ಕೆ ಸೀಮಿತರಾಗಿಲ್ಲ. ಅವರು ವಿಶ್ವ ಮಾನ್ಯರು. ಎಲ್ಲರನ್ನು ಉದ್ಧರಿಸುವ ಮಹಾಮಹಿಮರು. ಅಂತಲೇ ರಾಯರ ಸನ್ನಿಧಾನ ಮಂತ್ರಾಲಯಕ್ಕೆ ಇಂದಿಗೂ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆದು ಪಾವನರಾಗುತ್ತಿz್ದÁರೆ ಎಂದು ಹೇಳಿದರು.
ಬ್ರಹ್ಮಪುರ ಉತ್ತರಾದಿ ಮಠದಲ್ಲಿ ಶ್ರೀಮಠದ ವ್ಯವಸ್ಥಾಪಕ ಪಂ.ವಿನೋದಾಚಾರ್ಯ ಗಲಗಲಿ ನೇತೃತ್ವದಲ್ಲಿ ರಾಯರ ಮಧ್ಯಾರಾಧನೆ ಸಂಭ್ರಮದಿAದ ನೆರವೇರಿತು. ಬೆಳಗ್ಗೆ ಪಂಚಾಮೃತ ಅಭಿಷೇಕ, ಅಲಂಕಾರ, ಪೂe,ೆ ವಿವಿಧ ಪಾರಾಯಣ ಸಂಘಗಳಿAದ ರಾಯರ ಅಷ್ಟೋತ್ತರ ಪಾರಾಯಣ. ರಥೋತ್ಸವ ಹಾಗೂ ಭಕ್ತರಿಗೆ ತೀರ್ಥ ಪ್ರಸಾದ ನಡೆಯಿತು.
ಜೇವರ್ಗಿ ಕಾಲನಿ ರಾಯರ ಮಠದಲ್ಲಿ ಬೆಳಗ್ಗೆ ವಿಶೇಷ ಅಲಂಕಾರ, ಪೂಜೆ, ರಾಯರ ಅಷ್ಟೋತ್ತರ, ರಥೋತ್ಸವ, ಮಹಿಳಾ ಭಜನಾ ಮಂಡಳಿಗಳಿAದ ಭಜನೆ ಹಾಗೂ ತೀರ್ಥ ಪ್ರಸಾದ ನಡೆಯಿತು. ಮಂಡಳಿ ಅಧ್ಯP್ಷÀ ನರೇಂದ್ರ ಫಿರೋಜಾಬಾದಕರ್, ಪ್ರಶಾಂತ ಕೊರಳ್ಳಿ, ಮಾಧವರಾವ್ ತಾವರಗೇರಾ, ವಾಸುದೇವರಾವ್ ಮುಂಡರಗಿ, ಸುಧೀಂದ್ರ ಜೋಗೂರು, ಪ್ರಹ್ಲಾದ್ ಮಟಮಾರಿ, ಪವನ್ ಕುಲಕರ್ಣಿ, ಅರವಿಂದ ನವಲಿ, ವಿನಾಯಕ ಕುಲಕರ್ಣಿ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಬಸವೇಶ್ವರ ಕಾಲನಿ ರಾಯರ ಮಠದಲ್ಲೂ ರಥೋತ್ಸವ ಜರುಗಿತು. ಅಧ್ಯಕ್ಷ ಸದಾನಂದ ಅಗ್ನಿಹೋತ್ರಿ, ರಂಗನಾಥ ದೇಸಾಯಿ, ಮೋಹನ ಪಾಟೀಲ್, ರಾಘವೇಂದ್ರ ಬೋರಗಾಂವಕರ್, ರಘು ಕಟ್ಟಿ ಇತರರಿದ್ದರು. ಜಗತ್ ಬಡಾವಣೆ ಗೋಮುಖ ರಾಯರ ಮಠದಲ್ಲಿ ನಡೆದ ರಥೋತ್ಸವದಲ್ಲಿ ಪವನ್ ಫಿರೋಜಾಬಾದ್ ಸೇರಿದಂತೆ ಬಡಾವಣೆಯ ಗಣ್ಯರು ಪಾಲ್ಗೊಂಡಿದ್ದರು. ಹಾಗೂ ಪ್ರಶಾಂತ ನಗರ ಹನುಮಾನ ಮಂದಿರ ನಡೆದ ಕಾರ್ಯಕ್ರಮದಲ್ಲಿ ಶಾಮರಾವ್ ಕುಲಕರ್ಣಿ, ಗುಂಡಾಚಾರ್ಯ ನರಿಬೋಳ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net