

ನಾಪೋಕ್ಲು: ಗುರು, ಶಿಷ್ಯರ ಬಾಂಧವ್ಯ ಚೆನ್ನಾಗಿದ್ದರೆ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ ಎಂದು ನೇತಾಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಕೆ ಮನು ಮುತ್ತಪ್ಪ ಹೇಳಿದರು.
ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಉತ್ತಮ ವಿದ್ಯಾರ್ಥಿಗಳಿಂದ ದೇಶದ ಸುಭಿಕ್ಷವಾಗಲಿದೆ. ಒಂದು ವಾರ ಎನ್‌ಎಸ್‌ಎಸ್ ಶಿಬಿರದಲ್ಲಿ ಶಿಬಿರಾರ್ಥಿಗಳು ಹಾಗೂ ಶಿಬಿರಾಧಿಕಾರಿಗಳು ಗ್ರಾಮೀಣ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದ್ದಾರೆ. ಕಾಲೇಜಿನಿಂದ ಉತ್ತಮ ಪ್ರತಿಭೆಗಳು ಹೊರಬರುವಂತಾಗಲಿ ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್ ಡಾ.ರಾಘವ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಘಟಕವು ರಾಷ್ಟ್ರ ನಿರ್ಮಾಣಕ್ಕಾಗಿ ಹಾಗೂ ರಾಷ್ಟ್ರೀಯ ಭಾವೈಕ್ಯತೆಕ್ಕಾಗಿ ಶ್ರಮಿಸುತ್ತದೆ. ವಿದ್ಯಾರ್ಥಿಗಳಲ್ಲಿ ಐಕ್ಯತೆ, ಶಿಸ್ತು ಇದ್ದರೆ ಸಾಧನೆಯ ಶಿಖರ ಏರಬಹುದು ಎಂದರು.
ನೇತಾಜಿ ವಿದ್ಯಾ ಸಂಸ್ಥೆಯ ನಿರ್ದೇಶಕ ಮುಕ್ಕಾಟಿರ ಎಂ.ವಿನಯ್, ಉಪಾಧ್ಯಕ್ಷ ಸುತನ್ ಸುಬ್ಬಯ್ಯ, ನಿರ್ದೇಶಕರಾದ ತಾಪಂಡ ವರುಣ್ ಸುಬ್ಬಯ್ಯ, ಅಪ್ಪುಮಣಿಯಂಡ ನವೀನ್, ಸಂಚಾಲಕ ನುಚ್ಚುಮಣಿಯಂಡ ಚಿಂಗಪ್ಪ, ಬಲ್ಲಮಾವಟಿ ಗ್ರಾಪಂ ಅಧ್ಯಕ್ಷ ಮಣವಟೀರ ಹರೀಶ್ ಕುಶಾಲಪ್ಪ, ಸದಸ್ಯರಾದ ಮಚುರ ರವೀಂದ್ರ, ಚೋಕಿರ ಬಾಬಿ ಭೀಮಯ್ಯ, ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಳೆಯಂಡ ಅಪ್ಪಚು, ಸದಸ್ಯರಾದ ಚೀಯಕ ಪೂವಂಡ ರೀನ ವಿಠಲ, ಕೈಬುಲಿರ ಯಶೋದಾ, ಶಿಬಿರಾಧಿಕಾರಿಗಳಾದ ಡಾ.ಗಾಯತ್ರಿ, ಡಾ.ಮಹದೇವಯ್ಯ, ಎನ್.ಟಿ.ಸಚಿನ್, ಮಂಜುನಾಥ ಗೌಡ, ಖುರ್ಶಿದಾ ಬಾನು ಇದ್ದರು.