ಗುರು ಪರಂಪರೆ ಮುಂದುವರಿಯಲಿ

13Snk1
Published on

ಸಂಕೇಶ್ವರ: ಗುರು ಪರಂಪರೆ ಪದ್ಧತಿ ಸದಾ ಮುಂದುವರಿಯಬೇಕು ಎಂದು ವಿಶ್ವ ಚೇತನ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಹೇಶ ದೇಸಾಯಿ ಹೇಳಿದರು.

ಸ್ಥಳೀಯ ವಿಶ್ವ ಚೇತನ ವಿದ್ಯಾ ಸಂಸ್ಥೆಯ ಸ್ವಾಮಿ ವಿವೇಕಾನಂದ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆ ಕಾರ್ಯದರ್ಶಿಗಳಾದ ಎಂ.ಕೆ. ಪಾಟೀಲ ಮಾತನಾಡಿ, ಅಂತರಾಳದಿಂದ ಗುರು ಹಾರೈಸಿದರೆ ಜೀವನ ಪಾವನವಾಗುತ್ತದೆ ಎಂದರು.

ಶ್ರೀ ಸಿದ್ಧೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕ-ಶಿಕ್ಷಕಿಯರ ಪಾದಪೂಜೆ ಮಾಡಿದರು. ಜೈ ಮಲ್ಹಾರ ಸಿಇಒ ಸುಷ್ಮಾ ಪಾಟೀಲ ಹಾಗೂ ಶಾಲೆಯ ಶಿಕ್ಷಕರು ಹಾಜರಿದ್ದರು. ಭಕ್ತಿ ಚೌಗಲಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net