ಗುರು ನಾಮಸ್ಮರಣೆಯಿಂದ ಜೀವನ್ಮುಕ್ತಿ

1
ರಡ್ಡೇರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಅಮರೇಶ್ವರ ಮಹಾರಾಜರು ಮಾತನಾಡಿದರು. ಗುರುಪಾದ ಶ್ರೀ, ರೇವಣಸಿದ್ದೇಶ್ವರ ಮಹಾರಾಜರು, ಹಣಮಂತ ಮಹಾರಾಜರು, ಮೃತ್ಯುಂಜಯ ಮಹಾರಾಜರು ಇತರರಿದ್ದರು.
Published on

ಅಥಣಿ ಗ್ರಾಮೀಣ: ಜೀವ ಮತ್ತು ಭಾವ ಒಂದಾದರೆ ಸದ್ಗುರು ಒಲಿಯುತ್ತಾನೆ ಎಂದು ಕೌಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಗಿರಿಮಲ್ಲೇಶ್ವರ ಮಹಾರಾಜರ ಆಶ್ರಮ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು

ಊರಿನಲ್ಲಿ ಸೌಹಾರ್ದ ಮೂಡಬೇಕಾದರೆ ಒಮ್ಮನಸ್ಸಿನಿಂದ ಕೆಲಸ ಮಾಡಬೇಕು. ಈ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ವೈವಿಧ್ಯದಲ್ಲಿ ಏಕತೆ ಕಾಣುವ ಜನರಿದ್ದಾರೆ. ಗುರು ನಾಮಸ್ಮರಣೆ ಮಾಡಿದರೆ ಜೀವನ್ಮುಕ್ತರಾಗಲು ಸಾಧ್ಯ. ವೈಮನಸ್ಸು ಮರೆತು ಪ್ರೀತಿಯ ಬೆಸುಗೆ ಬೆಸೆಯಲು ಸತ್ಸಂಗ, ಪ್ರವಚನ ಅವಶ್ಯವಾಗಿ ಆಲಿಸಬೇಕು ಎಂದರು.

ಇಂಚಗೇರಿ ರೇವಣಸಿದ್ಧೇಶ್ವರ ಮಹಾರಾಜರು ಮಾತನಾಡಿ, ಗುರುವಿನಲ್ಲಿ ವಿಶ್ವಾಸವಿಟ್ಟವರಿಗೆ ಹಾಗೂ ಆತನ ಆಜ್ಞೆ ಪಾಲಿಸುವವರಿಗೆ ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಸಾಂಸಾರಿಕ ಜೀವನದಷ್ಟೇ ಅಷ್ಟೇ ಪಾರಮಾರ್ಥಕ್ಕೂ ಪ್ರಾಧಾನ್ಯ ನೀಡಬೇಕು ಎಂದರು.
ಯಕ್ಕಂಚಿಯ ಗುರುಪಾದ ಸ್ವಾಮೀಜಿ ಮಾತನಾಡಿ, ಸಾಧ್ಯವಾದರೆ ಗುರು ನಾಮಸ್ಮರಣೆ ಸತ್ಕಾರ್ಯ ಕೈಗೊಳ್ಳಬೇಕು. ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನ ಸುಗಮ ಎಂದರು.

ಶೇಗುಣಸಿಯ ಹಣಮಂತ ಮಹಾರಾಜರು, ವಿಲಾಸರಾವ ಮಹಾರಾಜರು, ಮೃತ್ಯುಂಜಯ ಮಹಾರಾಜರು ಪ್ರವಚನ ನೀಡಿದರು. ಅಣ್ಣಾಸಾಬ ಬಿಸಲಾಪುರ ದಾಸಬೋಧ ವಾಚಿಸಿದರು. ಇಂಚಗೇರಿಯ ರೇವಣಸಿದ್ಧೇಶ್ವರ ಮಹಾರಾಜರ ಸಾನ್ನಿಧ್ಯದಲ್ಲಿ ಅಮರೇಶ್ವರ ಮಹಾರಾಜರು ಗಿರಿಮಲ್ಲೇಶ್ವರ ಮಹಾರಾಜರ ಆಶ್ರಮ ಉದ್ಘಾಟಸಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ನೆರವೇರಿಸಿದರು. ಸಹಸ್ರಾರು ಭಕ್ತರು ದೇವರಿಗೆ ಹೂವು ಸಮರ್ಪಿಸಿ ನಾಮಸ್ಮರಣೆ ಮಾಡಿದರು. ವಿವಿಧ ಕಲಾವಿದರು ಕಲಾ ಪ್ರದರ್ಶನ ನೀಡಿದರು.

ಜಿಪಂ ಮಾಜಿ ಸದಸ್ಯ ಶ್ರೀಶೈಲ ನಾರಗೊಂಡ, ವಕೀಲ ಮುಕುಂದ ಬೆಳಗಲಿ, ಗ್ರಾಪಂ ಅಧ್ಯೆ ಸುವರ್ಣಾ ಮಡಿವಾಳ, ಲಕ್ಷ$್ಮಣ ಭೋಸಲೆ, ವಿವೇಕಾನಂದ ಹಳಿಂಗಳಿ, ಡಾ.ಮಹೇಶ ತೇರದಾಳ, ಸಂತೋಷ ಬೆಳ್ಳಂಕಿ, ಸುರೇಶ ಗಲಗಲಿ, ಶ್ರೀಶೆಲ ಬೆಳ್ಳಂಕಿ, ಮಹಾದೇವ ಗಲಗಲಿ, ತುಕಾರಾಮ ಖೋತ, ಮಂಜುನಾಥ ಹುಲಸದಾರ ಇತರರಿದ್ದರು.

ರಡ್ಡೇರಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಅಮರೇಶ್ವರ ಮಹಾರಾಜರು ಮಾತನಾಡಿದರು. ಗುರುಪಾದ ಶ್ರೀ, ರೇವಣಸಿದ್ದೇಶ್ವರ ಮಹಾರಾಜರು, ಹಣಮಂತ ಮಹಾರಾಜರು, ಮೃತ್ಯುಂಜಯ ಮಹಾರಾಜರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net