ಗುರು ತಿಪ್ಪೇಶನ ರಥೋತ್ಸವ ಡಿ. 6ಕ್ಕೆ

Thipperudraswamy
Published on

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಕೋನಸಾಗರ ಗ್ರಾಮದ ಗುರು ತಿಪ್ಪೇರುದ್ರಸ್ವಾಮಿಯ ರಥೋತ್ಸವವೂ ಡಿ. 6ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಲಿದೆ.

ಸ್ವಾಮಿಯ ದೀಪಾರಾಧನೆ, ಹೊರಮಠಕ್ಕೆ ಸ್ವಾಮಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ಗುರುವಾರ ವಿಜೃಂಭಣೆಯಿಂದ ನೆರವೇರಿತು. 6ರ ಬೆಳಗ್ಗೆ 8ಕ್ಕೆ ಕಳಸ ಪೂಜೆ, 10ಕ್ಕೆ ರಥಕ್ಕೆ ಅನ್ನ ನೈವೇದ್ಯ, ಮಧ್ಯಾಹ್ನ 2ಕ್ಕೆ ಸ್ವಾಮಿಯ ಮಹಾ ರಥೋತ್ಸವ ನೆರವೇರಲಿದೆ.

7ರಂದು ಸ್ವಾಮಿಯ ಹೂವಿನ ಪಲ್ಲಕ್ಕೋತ್ಸವ, ಓಕಳಿ ಉತ್ಸವ ರಾತ್ರಿ 7ಕ್ಕೆ ನಡೆಯಲಿದೆ. 8ರಂದು ಮುಂಜಾನೆ 5ಕ್ಕೆ ಸ್ವಾಮಿಯನ್ನು ಹೊರಮಠಕ್ಕೆ ಸಕಲ ಮಂಗಳವಾದ್ಯದೊಂದಿಗೆ ಕರೆದೊಯ್ಯುವುದು. ರಾತ್ರಿ 7ಕ್ಕೆ ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮಿಯ ಸೇವಾ ಸಮಿತಿ ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.

ಚಳ್ಳಕೆರೆ ಹಾಗೂ ಕೋನಸಾಗರದ ಭಕ್ತರು ರಥಕ್ಕೆ ದೊಡ್ಡ ಹೂವಿನ ಹಾರಗಳ, ಹೂವಿನ ಪಲ್ಲಕ್ಕಿ, ವಿದ್ಯುದ್ದೀಪಾಲಂಕಾರ ಸೇವೆ ನೆರವೇರಿಸಲಿದ್ದಾರೆ.

ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಗ್ರಾಮದ ಮಹಂತೇಶ್‌ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net