

ಆಳಂದ: ಗುರು ಅಂದರೆ ಅಪ್ರತಿಮ. ಅಧ್ಯಾತ್ಮ ಮನಸ್ಸು ವಿಶಾಲ ಮಾಡುತ್ತದೆ. ನಮ್ಮ ಮನಸ್ಸು ಚಂಚಲವಿರುತ್ತದೆ. ಶಾಸ್ತç, ಧರ್ಮ ಜ್ಞಾನಿಗಳ ಉz್ದೆÃಶ ಮನಸ್ಸನ್ನು ನಿಗ್ರಹಿಸಿ ಸಮಾಜದಲ್ಲಿನ ಸಕಲ ಜೀವಿಗಳು ಸಹಬಾಳ್ವೆ ನಡೆಸುವುದೇ ಗುರಿಯಾಗಿರುತ್ತದೆ ಎಂದು ನಂದಗಾAವದ ಶ್ರೀ ರಾಜಶೇಖರ ಮಹಾಸ್ವಾಮೀಜಿ ನುಡಿದರು.
ನಿಂಬರ್ಗಾದ ಶ್ರೀ ಹುಚ್ಚೇಶ್ವರ ಮಠದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಶ್ರೀ ಸಂಗನಬಸವ ಮಹಾಸ್ವಾಮೀಜಿ ದ್ವಿತೀಯ ಪುಣ್ಯ ಸ್ಮರಣೋತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ನಿಂಬರ್ಗಾದಲ್ಲಿ ಶ್ರೀ ಶಿವಲಿಂಗ ದೇವರು ಪಟ್ಟಾಧಿಕಾರಕ್ಕೆ ಬಂದ ಬಳಿಕ ಮಠದ ಕಾರ್ಯ ಚಟುವಟಿಕೆಗಳು ಬೆಳಕಿಗೆ ಬರುತ್ತಿವೆ. ಇದಕ್ಕೆ ಎಲ್ಲ ಭಕ್ತಾದಿಗಳ ಭಕ್ತಿ ಸೇವೆಯೇ ಕಾರಣ ಎಂದರು.
ಸನ್ಮಾನ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್ ಮಾತನಾಡಿ, ನಾವು ರಾಜಕೀಯದಿಂದ ದೂರ ಉಳಿದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತನಾಗಿ ಸೇವೆ ಸಲ್ಲಿಸಿದಾಗಲೇ ಮಠಗಳ ಕಾರ್ಯ ಬೆಳಕಿಗೆ ಬರುತ್ತದೆ. ವೇದಿಕೆಯಲ್ಲಿ ಇರುವ ಪ್ರತಿಯೊಬ್ಬರೂ ಭಕ್ತಿ ಸೇವೆ ಸಲ್ಲಿಸಬೇಕು ಎಂದು ಕೋರಿದರು.
ಮಾಡಿಯಾಳ ವಪ್ಪತೇಶ್ವರ ಮಠದ ಶ್ರೀ ಮರುಳಸಿದ್ದ ಮಹಾಸ್ವಾಮೀಜಿ ಸಮ್ಮುಖ, ಹಿರೇಸಾವಳಗಿ ಶ್ರೀ ಗುರುನಾಥ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹತಗುಂದಾದ ಪೂಜ್ಯ ಶಿವಲೀಲಾ ತಾಯಿ, ಕೊಡಗನೂರದ ಶ್ರೀ ಕುಮಾರ ದೇವರು, ಶ್ರೀ ಶಶಿಕುಮಾರ ದೇವರು, ಪ್ರಮುಖರಾದ ರಾಮಚಂದ್ರ ಅವರಳ್ಳಿ, ಶರಣಗೌಡ ಪಾಟೀಲ್, ನಾಗರಾಜ ಶೇಗಜಿ, ಶರಣಬಸಪ್ಪ ಸರಸಂಬಿ, ಮಹಾಂತಪ್ಪ ಬಿರಾದಾರ, ಗುರು ಪಾಟೀಲ್, ವಿದ್ಯಾಧರ ಕುಂಬಾರ, ಅಮೃತ ಬಿಬ್ರಾಣಿ ಇತರರಿದ್ದರು.
ಸತತ ಐದು ದಿನ ಚಿಣ್ಮಯಗಿರಿಯ ಶ್ರೀ ವೀರಮಹಾಂತ ಶಿವಾಚಾರ್ಯ ಪ್ರವಚನ ನಡೆಸಿಕೊಡುವರು. ಶ್ರೀ ಶಿವಲಿಂಗ ದೇವರು ಆಗಮಿಸಿದ ಎಲ್ಲ ಪೂಜ್ಯರು, ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು. ಅಣ್ಣಾರಾವ ದುಂಗುಡ ನಿರೂಪಣೆ ಮಾಡಿ ವಂದಿಸಿದರು.