ಗುರಿ ಸಾಧಿಸಲು ಶಿಸ್ತು ಮುಖ್ಯ

kls jain
ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ವರ್ಷದ ಪತ್ಯೇತರ ಚುಟವಟಿಕೆಗಳ ಸಮಾರೋಪ ಸಮಾರಂಭವನ್ನು ಕಳಸ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಕೆ.ವಿ.ನರೇಂದ್ರ ಉದ್ಘಾಟಿಸಿದರು. ವಿನಯಕುಮಾರ್ ಶೆಟ್ಟಿ, ವಿಶುಕುಮಾರ್, ಎಂ.ಎಸ್.ಸುಧೀರ್ ಜೈನ್, ಎನ್.ನಿವೇದಿತಾ ಇತರರಿದ್ದರು.
Published on

ಕಳಸ: ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಜೀವನ ಅತ್ಯಂತ ಸವಾಲಿನದ್ದಾಗಿದೆ. ಅವರ ಮನಸ್ಸನ್ನು ವಿಚಲಿತಗೊಳಿಸಬಲ್ಲ ಹಲವಾರು ವಿಷಯಗಳು ಸುತ್ತಲೂ ಆವರಿಸಿಕೊಂಡಿವೆ. ಇಂಥ ಸಂದರ್ಭದಲ್ಲಿ ಗುರಿ ಇರಿಸಿಕೊಂಡು ಶಿಸ್ತಿನಿಂದ ಪಾಲಿಸುವ ವಿದ್ಯಾರ್ಥಿ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಪಶುಸಂಗೋಪನಾ ಇಲಾಖೆ ನಿವೃತ್ತ ಉಪನಿರ್ದೇಶಕಿ ಡಾ. ಜಾನಕಿ ಸುಂದರೇಶ್ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ವಷರ್ದ ಪತ್ಯೇತರ ಚುಟವಟಿಕೆಗಳ ಸಮಾರೋಪದಲ್ಲಿ ಮಾತನಾಡಿ, ವಿದ್ಯಾಭ್ಯಾಸದ ವೇಳೆ ಬೇರೆ ಚಟುವಟಿಕೆಗೆ ಹೆಚ್ಚಿನ ಮಹತ್ವ ನೀಡಬಾರದು ಎಂದರು.

ಕಳಸ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಕೆ.ವಿ.ನರೇಂದ್ರ ಮಾತನಾಡಿ, ಬೋಧಕರು ಹಾಕಿಕೊಡುವ ಮಾರ್ಗದಲ್ಲಿ ನಡೆಯುವುದು ವಿದ್ಯಾರ್ಥಿಗಳ ಕರ್ತವ್ಯ. ಶಿಕ್ಷಕರ ಮಾತಿನಂತೆ ನಡೆದ ಹಲವರು ಮಹತ್ತರ ಸಾಧನೆ ಮಾಡಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಸಮಯವನ್ನು ಕೌಶಲ, ಒಳ್ಳೆಯ ಚಾರಿತ್ರ್ಯಕ್ಕೆ ಬಳಸಬೇಕು ಎಂದರು.

ಕಾಲೇಜಿನಲ್ಲಿ ನಡೆದ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ, ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ವಿಶುಕುಮಾರ್, ಡಾ. ಆದಿತ್ಯ ಅಡಿಗ, ಎಂ.ಎಸ್.ಸುಧೀರ್ ಜೈನ್, ಎನ್.ನಿವೇದಿತಾ, ಸಿ.ಎನ್.ಸೋಮಶೇಖರ್, ಡಾ. ಕೆ.ಆರ್.ಪುನೀತ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net