

ಕೋಲಾರ : ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಹೊಂದಿ, ಅದನ್ನು ಸಾಧಿಸಲು ಯತ್ನಿಸಬೇಕು ಎಂದು ಜಿಪಂ ಸಿಇಒ ಪದ್ಮಾಬಸಂತಪ್ಪ ತಿಳಿಸಿದರು.
ತಾಲೂಕಿನ ಕೆಂಬೋಡಿ ಜನತಾ ಪ್ರೌಢಶಾಲೆಯಲ್ಲಿ ಮಂಗಳವಾರ ಹಳೆಯ ವಿದ್ಯಾರ್ಥಿಗಳ ಸಂಘ, ಪ್ರಸಕ್ತ ಸಾಲಿನ ಪರಿಚಾಯಕೆ ಬಿಡುಗಡೆ ಹಾಗೂ ಕಲಾ ಮತ್ತು ವಿಜ್ಞಾನ ಸಂಘ ಉದ್ಘಾಟಿಸಿ ಮಾತನಾಡಿ, ಪರಿಶ್ರಮದಿಂದ ಮಕ್ಕಳು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು ಎಂದರು.
ವಡಗೂರು ಗ್ರಾಪಂ ಪಿಡಿಒ ರಮೇಶ್ ಬಾಬು, ಜನತಾ ವಿದ್ಯಾ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಬಿಸಪ್ಪ ಗೌಡ, ಹಳೆಯ ವಿದ್ಯಾರ್ಥಿಗಳ ಸಂಘದ ನಿರ್ದೇಶಕ ಕೆ.ವಿ.ಮುನಿವೆಂಕಟಪ್ಪ, ಮುಖ್ಯಶಿಕ್ಷಕ ಕೆ.ವಿ.ರಾಜಣ್ಣ, ಹಳೆಯ ವಿದ್ಯಾರ್ಥಿ ಶ್ರೀನಿವಾಸಗೌಡ ಇದ್ದರು.