ಗುರಿ ಸಾಧನೆಗೆ ಶಿಸ್ತು ಅಗತ್ಯ

CTD 0003 vid
Published on

ಚಿತ್ರದುರ್ಗ: ಮೊಬೈಲ್‌ಗೀಳು ಆರೋಗ್ಯ, ಪ್ರತಿಭೆಗೆ ಹಾನಿಕರವೆಂದು ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಹೇಳಿದರು.ನಗರದ ವಿದ್ಯಾವಿದ್ಯಾವಿಕಾಸ ವಿದ್ಯಾಸಂ ಸ್ಥೆಯಲ್ಲಿ ಪಠ್ಯ,ಪಠ್ಯೇತರ ಚಟುವಟಿಕೆ ಪ್ರೋತ್ಸಾಹಿಸುವ ಸಲುವಾಗಿ ರಚಿಸಿರುವ ಪದ್ಮಶ್ರೀ,ಪದ್ಮವಿಭೂಷಣ,ಪದ್ಮಭೂಷಣ ಹಾಗೂ ಭಾರತರತ್ನ ಎ ಂಬ ನಾಲ್ಕು ವಿಭಾಗಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಸ್ತು ಶೈಕ್ಷಣಿಕ,ವೃತ್ತಿ ಗುರಿ ಸಾಧನೆಗೆ ನೆರವಾಗುತ್ತದೆ ಎಂದ ಅವರು,ಶಾಲೆಯಲ್ಲಿ ಪ್ರಾರಂಭಿಸಿರುವ ವಿಭಾಗಗಳು ಶೈಕ್ಷಣಿಕ ಕ್ರೀಡೆ,ಸಾಂಸ್ಕೃತಿಕ ಚ ಟುವಟಿಕೆಗಳನ್ನು ಪ್ರೋತ್ಸಾಹಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಲು ನೆರವಾಗಲಿವೆ ಎಂದರು. ಕಾರ‌್ಯಕ್ರಮ ಉದ್ಘಾಟಿಸಿದ ಸಂಸ್ಥೆ ಕಾರ‌್ಯದರ್ಶಿ ಬಿ.ವಿಜಯ್‌ಕುಮಾರ್ ಮಾತನಾಡಿ,ರಚಿಸಿರುವ ಈ ವಿವಿಧ ವಿಭಾಗಗಳ ಮಹತ್ವವನ್ನು ವಿವರಿಸಿದರು.
ಸಂಸ್ಥೆ ನಿರ್ದೇಶಕ ಎಸ್.ಎಂ ಪೃಥ್ವೀಶ್,ಸುನೀತಾವಿಜಯ್‌ಕುಮಾರ್,ಮುಖ್ಯಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ,ಐಸಿಎಸ್‌ಸಿ ಪ್ರಾಚಾರ‌್ಯ ಪಿ.ಬಸವರಾಜ ಯ್ಯ,ಉಪಪ್ರಾಚಾರ್ಯ ಬಿ.ಅವಿನಾಶ್,ಶಿಕ್ಷಕರು,ಬೋಧಕೇತರ ವೃಂದದವರು,ವಿದ್ಯಾರ್ಥಿಗಳು ಇದ್ದರು. ಸನಿಹಾಸಿಂಚನ ನಿರೂಪಿಸಿದರು, ಜುಹಾ,ಸಾರಾ ಸ್ವಾಗತಿಸಿ,ವರ್ಷಿತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net