ಗುರಿ ಸಾಧನೆಗೆ ಬೇಕು ಪ್ರಯತ್ನ

3blk1
 ಭಾಲ್ಕಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೆಸೆಟ್‌ನಲ್ಲಿ ರಾಜ್ಯಕ್ಕೆ ೨೫ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಪೂರ್ವಿರೆಡ್ಡಿ ಶಿವಶರಣರೆಡ್ಡಿ ಅವರನ್ನು ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸನ್ಮಾನಿಸಿ, ಪ್ರೋತ್ಸಾಹಿಸಿದರು. ಸೋಮನಾಥಪ್ಪ ಅಷ್ಟೂರೆ, ವಿದ್ಯಾವತಿ ಅಷ್ಟೂರೆ, ಅಶೋಕ ಬಾವುಗೆ ಇದ್ದರು.
Published on

ಭಾಲ್ಕಿ: ವಿದ್ಯಾರ್ಥಿಗಳಲ್ಲಿ ಉನ್ನತ ಗುರಿ ಅದಕ್ಕೆ ಪೂರಕ ಪ್ರಯತ್ನ ಇದ್ದರೆ ಸಾಧನೆಗೆ ಸಹಕಾರಿ ಆಗುತ್ತದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕೆಸೆಟ್‌ನ ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ ೨೫ನೇ ರ‍್ಯಾಂಕ್ ಪಡೆದ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ವಿದ್ಯಾರ್ಥಿನಿ ಪೂರ್ವಿರೆಡ್ಡಿ ಶಿವಶರಣರೆಡ್ಡಿ ಅವರನ್ನು ಸನ್ಮಾನಿಸಿ ಮಾತನಾಡಿದ ಶ್ರೀಗಳು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ ಹೆಚ್ಚುತ್ತಿದೆ. ಸಾಧನೆಗೆ ಯಾವುದೆ ಅಡ್ಡ ಮಾರ್ಗವಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ನಿರ್ದಿಷ್ಟ ಯೋಚನೆ, ಯೋಜನೆ ರೂಪಿಸಿಕೊಂಡು ಉನ್ನತ ಸಾಧನೆಯತ್ತ ಗಮನ ಹರಿಸಬೇಕು ಎಂದರು.

ಗ್ರಾಮೀಣ ಭಾಗದ ವಿದ್ಯಾರ್ಥಿನಿ ಪೂರ್ವಿರೆಡ್ಡಿ ಅವರು ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ ೨೫ನೆಯ ರ‍್ಯಾಂಕ್ ಪಡೆದಿರುವುದು ಹೆಮ್ಮೆ ತರಿಸಿದೆ. ಪಶು ವೈದ್ಯಕೀಯ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷ ಸೋಮನಾಥಪ್ಪ ಅಷ್ಟೂರೆ, ವಿದ್ಯಾವತಿ ಅಷ್ಟೂರೆ, ಅಶೋಕ ಬಾವುಗೆ, ಶಿವಶರಣರೆಡ್ಡಿ, ಜಗದೇವಿ ಶಿವಶರಣರೆಡ್ಡಿ, ಉಪನ್ಯಾಸಕ ಸುನಿಲ ರೆಡ್ಡಿ, ಸಾಹಿತಿ ರಾಜು ಜುಬರೆ ಇದ್ದರು.

ಚನ್ನಬಸವೇಶ್ವರ ಗುರುಕುಲದಲ್ಲಿ ಕಲಿತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೆಸೆಟ್, ಜೆಇಇ, ನೀಟ್, ಎನ್‌ಐಟಿ ಸೇರಿದಂತೆ ಮುಂತಾದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ರ‍್ಯಾಂಕ್ ಪಡೆದು ಗಮನಾರ್ಹ ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಸರಕಾರಿ ಕೋಟಾದಲ್ಲಿ ಪ್ರವೇಶ ಪಡೆಯುತ್ತಿರುವುದು ಹೆಮ್ಮೆ ತರಿಸಿದೆ.

| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net