ಗುರಿ, ಗುರುವಿನ ಮಾರ್ಗದರ್ಶನ ಅವಶ್ಯ

manthan
Published on

ಹುಬ್ಬಳ್ಳಿ: ನಗರದ ಚೇತನ ಪಿಯು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯು ವಿಭಾಗದ ವಾರ್ಷಿಕೋತ್ಸವ -ಮಂಥನ 2025 ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಕ್ಷ ಅಕಾಡೆಮಿ ಸಂಸ್ಥಾಪಕಿ ಲಕ್ಷ್ಮೀ ಹಿರೇಮಠ, ವಿದ್ಯಾರ್ಥಿಗಳು ಜೀವನದಲ್ಲಿ ಸರಿಯಾದ ಗುರಿ ಮತ್ತು ಗುರುವಿನ ಮಾರ್ಗದರ್ಶನ ಹೊಂದಿದ್ದಾರೆ ಯಶಸ್ಸು ಗಳಿಸಲು ಸಾದ್ಯ ಎಂದು ಕರೆ ನೀಡಿದರು.

ಭಗನಿ ನಿವೇದಿತಾ ಶಾಲೆಯ ಪ್ರಾಚಾರ್ಯ ರಾಜು ಹೈಬತ್ತಿ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರ ರೂಢಿಸಿಕೊಳ್ಳುವುದರ ಜತೆಗೆ ತಂದೆ ತಾಯಿ ಮತ್ತು ಗುರುಗಳನ್ನು ಗೌರವಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಡಾ. ವಿಶ್ವನಾಥ ಕೊರವಿ, ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಸಂಸ್ಥೆ ಮತ್ತು ತಂದೆ ತಾಯಿಗೆ ಹೆಮ್ಮೆ ತರುವಂತೆ ಸಮಾಜದಲ್ಲಿ ಬೆಳೆಯಬೇಕು ಎಂದು ಹೇಳಿದರು.

ಪ್ರಾಚಾರ್ಯ ಡಾ. ಎ.ಆರ್. ವಡಕಣ್ಣವರ್, ಶೈಕ್ಷಣಿಕ ಸಲಹೆಗಾರದ ಡಾ. ಕೆ. ಸಿ. ಪಾಂಗಿ, ಪಿಯು ವಿಭಾಗ ಮುಖ್ಯಸ್ಥೆ ಪೊ›. ನಿಧಿ ದೇಶಪಾಂಡೆ, ಡಾ. ಶಿಲ್ಪಾ ಕುಲಕರ್ಣಿ, ಡಾ. ಯಶೋಧಾ ನಾಯಕ, ಪೊ›. ಭಾರತಿ, ಪೊ›. ವೀಣಾ, ಪೊ›. ಸಹನಾ, ಪೊ›. ಅನ್ನಪೂರ್ಣ ಉಪಸ್ಥಿತರಿದ್ದರು. ಪೊ›. ಭಾಗ್ಯಶ್ರೀ ಬಳಿಗಾರ ನಿರೂಪಿಸಿದರು. ಪೊ›. ತೇಜಶ್ರೀ ಸ್ವಾಗತಿಸಿದರು. ಪೊ›. ಅನುಪಮಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net