

ಗುಬ್ಬಿ : ಅಮ್ಮನಟ್ಟ ಅರಣ್ಯ ಪ್ರದೇಶದ ಗಡಿ ಗುರುತಿಸುವ ನೆಪದಲ್ಲಿ ಕೃಷಿ ಜಮೀನಿಗೆ ನುಗ್ಗಿ ಅಡಕೆ, ತೆಂಗಿನ ಮರಗಳನ್ನು ಧ್ವಂಸ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ರೈತರು ಹಾಗೂ ರೈತರ ಸಂಘದ ಕಾರ್ಯಕರ್ತರು ತಾಲೂಕು ಕಚೇರಿಗೆ ಸೋಮವಾರ ಸಂಜೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅಲ್ಲದೇ ಅಧಿಕಾರಿಗಳು ಕತ್ತರಿಸಿದ ಎಲ್ಲ ಮರಗಳನ್ನು ಟ್ರ್ಯಾಕ್ಟರ್ ಮೂಲಕ ತಾಲೂಕು ಕಚೇರಿ ಮುಂದೆ ಸುರಿದು ಆಕ್ರೋಶ ಹೊರಹಾಕಿದರು. ಅರಣ್ಯ ಇಲಾಖೆ ವಿರುದ್ಧ ೋಷಣೆ ಕೂಗಿದರು.
ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ನೇತೃತ್ವದ ತಂಡ ಏಕಾಏಕಿ ರೈತರ ಜಮೀನಿಗೆ ಅತಿಕ್ರಮಣ ಮಾಡಿದ್ದ್ಲದೇ ರೈತರ ವಿರುದ್ಧ ದೌರ್ನ್ಯದ ಮಾತುಗಳಾಡಿದ್ದಾರೆ. ಫಲ ನೀಡುತ್ತಿದ್ದ 30 ವರ್ಷದ ಅಡಕೆ, ತೆಂಗು ಮತ್ತು ವೀಳ್ಯದೆಲೆ ಅಂಬು ಮಣ್ಣು ಪಾಲು ಮಾಡಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದರು.
ಮರ, ಗಿಡಗಳನ್ನು ಬೆಳೆಸಿ ಪೋಷಿಸುವ ಕಾಯಕ ಮಾಡುವ ಅರಣ್ಯ ಇಲಾಖೆ ಕೃಷಿಕರ ಜಮೀನಿಗೆ ಹಿಟಾಜಿ ಯಂತ್ರ ನುಗ್ಗಿಸಿ ಅಡಕೆಮರಗಳು, ತೆಂಗಿನಮರಗಳು ಹಾಗೂ ವೀಳ್ಯದೆಲೆ ಅಂಬುಗಳನ್ನು ಕತ್ತರಿಸಿ ಕಟುಕಟನ ಪ್ರದರ್ಶಿಸಿದೆ. ಶಾರದಮ್ಮ ಜಮೀನಿನ ಬೆಳೆ ನಾಶ ಮಾಡದಂತೆ ಅಂಗಲಾಚಿದರೂ ಕಿಂಚಿತ್ತೂ ಕರುಣೆ ತೋರದ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆಪಾದಿಸಿದರು.
ಧರಣಿಗೆ ಬೆಂಬಲ ಸೂಚಿಸಿದ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಅನುಚಿತವಾಗಿ ವರ್ತಿಸಿದ ಅರಣ್ಯ ಇಲಾಖೆ ಕಾನೂನು ರೀತಿ ಕ್ರಮ ಕೈಗೊಳ್ಳದೆ ರೈತರಿಗೆ ತೊಂದರೆ ನೀಡಿದೆ ಎಂದರು. ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಬಿ.ಆರತಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕಗೊಳ್ಳುವ ಭರವಸೆ ನೀಡಿದರು. ವಕೀಲ ಶ್ರೀನಿವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಗ್ರಾಪಂ ಸದಸ್ಯ ರಮೇಶ್, ರೈತಸಂದ ಸಿ.ಜಿ.ಲೋಕೇಶ್, ಗುರುಚನ್ನಬಸಪ್ಪ, ಮುಖಂಡರಾದ ಮಹಾದೇವಯ್ಯ, ವಿನಯ್, ಸಂತೋಷ್ ಸೇರಿ ಅಮ್ಮನಟ್ಟ ಗ್ರಾಮಸ್ಥರು ಇದ್ದರು.
ಅಮ್ಮನಟ್ಟದ ಸ.ನಂಬರ್ 116 ರಲ್ಲಿನ 401 ಎಕರೆ ಅರಣ್ಯ ಪ್ರದೇಶದ ಗಡಿ ನಿರ್ಣಯ ಮಾಡಿದ್ದ ಇಲಾಖೆ ಗಡಿ ಕಲ್ಲುಗಳನ್ನು ನೆಟ್ಟಿದ್ದಾರೆ. ಭಾನುವಾರವೇ ಟ್ರಂಚ್ ಆರಂಭಿಸಿದ ದುಗ್ಗಪ್ಪ ತಂಡ ಗಡಿ ಕಲ್ಲು ಬಿಟ್ಟು ಏಕಾಏಕಿ ರೈತರಾದ ಪುಟ್ಟತಾಯಮ್ಮ, ದೊಡ್ಡತಿಮ್ಮಯ್ಯ, ಶಾರದಮ್ಮ ಅವರ ಜಮೀನಿಗೆ ಅತಿಕ್ರಮಣ ಮಾಡಿ ಅಡಕೆ, ತೆಂಗಿನಮರಗಳನ್ನು ಕತ್ತರಿಸಿದ್ದಾರೆ. ಕೆ.ಎನ್.ವೆಂಕಟೇಗೌಡ ರೈತಸಂದ ತಾಲೂಕು ಅಧಕ್ಷ