ಗುದ್ದಾಟವಿಲ್ಲ, ಒಟ್ಟಾಗಿ ಇದ್ದಾರೆ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನಡುವೆ ಯಾವುದೇ ಗದ್ದಾಟವಿಲ್ಲ. ಇಬ್ಬರೂ ಒಟ್ಟಾಗಿ ಇದ್ದಾರೆ ಎಂದು ಸಿಎಂ ರಾಜಕೀಯ ಸಲಹೆಗಾರ ಬಿ.ಆರ್. ಪಾಟೀಲ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ವಿಚಾರ ನನಗೆ ಗೊತ್ತಿಲ್ಲ. ನಾನು ಹೈಕಮಾಂಡ್ ಅಲ್ಲ. ನಾನು ಯಾವುದೇ ಹುದ್ದೆಯಲ್ಲಿ ಇಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆಯೂ ರಾಜಕೀಯ ನಿವೃತ್ತಿ ಪ್ರಸ್ತಾಪ ಮಾಡಿದ್ದರು. ಹೈಕಮಾಂಡ್ ಹೇಳಿದ ಮೇಲೆ ವಿಧಾನಸಭೆ ಚುನಾವಣೆಯಲ್ಲಿ ್ಸ ಸ್ಪರ್ಧೆ ಮಾಡಿದ್ದರು. ರಾಜ್ಯಕ್ಕೆ ಸಿದ್ದರಾಮಯ್ಯ ಅವರಂಥ ನಾಯಕರ ಅಡಳಿತ ಬೇಕು. ಮುಂದಿನ ದಿನಗಳಲ್ಲಿಯೂ ಅವರಂಥ ನಾಯಕರು ಬೇಕು ಎಂದು ಹೇಳಿದರು.

ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಲು ಸಭಾಪತಿಗಳು ಅವಕಾಶ ನೀಡಿದ್ದಾರೆ. ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುತ್ತೇವೆ. ಅಧಿವೇಶನದ ಸಮಯ ಹಾಳಾಗದಂತೆ ಸಮಪರ್ಕವಾಗಿ ಚರ್ಚೆ ಮಾಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net