ಗುತ್ತಿಗೆದಾರರ ಹಿತರಕ್ಷಣೆಗೆ ಸರ್ಕಾರ ಮುಂದಾಗಲಿ

29 KAMPLI 03
Published on

ಕಂಪ್ಲಿ: ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡುವ ಮೂಲಕ ಸರ್ಕಾರ ಗುತ್ತಿಗೆದಾರರ ಹಿತರಕ್ಷಣೆಗೆ ಮುಂದಾಗಬೇಕು ಎಂದು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ರಮೇಶ್ ದೇವಲಾಪುರ ಹೇಳಿದರು.

ಪಟ್ಟಣದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾನುವಾರ ಮಾತನಾಡಿದರು. ಗುತ್ತಿಗೆ ಕೆಲಸ ಸಿಗದಿರುವುದು, ಸಕಾಲಕ್ಕೆ ಬಿಲ್ ಪಾವತಿ ಆಗದಿರುವುದು, ಗ್ರಾವೆಲ್ ಸಿಗದಿರುವುದು ಸೇರಿದಂತೆ ನಾನಾ ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ಗುತ್ತಿಗೆದಾರರ ಕ್ಷೇಮಕ್ಕಾಗಿ ಸರ್ಕಾರ ಆಸಕ್ತಿ ತೋರಬೇಕಿದೆ ಎಂದರು.

ಸಂಘದ ಗೌರವಾಧ್ಯಕ್ಷ ಎನ್.ಮಲ್ಲಿಕಾರ್ಜುನರೆಡ್ಡಿ ಮಾತನಾಡಿ, ಇಂದಿನ ಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಸಭೆಯಲ್ಲಿ ಉಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಸಂಘದ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಒದಗಿಸುವಂತೆ ಪುರಸಭೆಗೆ ಅರ್ಜಿ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ರಾಮಾಂಜಿನಿ ಸುಗ್ಗೇನಹಳ್ಳಿ, ಪದಾಧಿಕಾರಿಗಳಾದ ಎನ್.ತಿಪ್ಪಯ್ಯ, ಪಿ.ಬಾಲೇಸಾಬ್ ಎಮ್ಮಿಗನೂರು, ಮೆಟ್ರಿ ಮಹೇಶ್, ವೀರಭದ್ರುಡು, ರಾಗಿ ಗಿರೀಶ್ ರಾಮಸಾಗರ, ಭಾಸ್ಕರ, ತಿಮ್ಮಾರೆಡ್ಡಿ ಸುಗ್ಗೇನಹಳ್ಳಿ, ಬಸವಪ್ರಭು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net