

ಕಲಬುರಗಿ: ಕಲ್ಯಾಣ ರ‍್ನಾಟಕ ಭಾಗದ ಗುತ್ತಿಗೆದಾರರಿಗೆ ಕಲ್ಯಾಣ ರ‍್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಗುತ್ತಿಗೆ ಕಾಮಗಾರಿಗಳನ್ನು ನೀಡಬೇಕು, ಕಾಮಗಾರಿ ಮಾಡಲು ಸಶಕ್ತರಿಲ್ಲದ ನರ‍್ಮಿತಿ ಕೇಂದ್ರ, ಲ್ಯಾಂಡ್ ರ‍್ಮಿಗೆ ಕಾಮಗಾರಿ ನೀಡಬಾರದು, ಪ್ಯಾಕೇಜ್ ಪದ್ಧತಿಯನ್ನು ಕೈ ಬಿಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭೇಟಿ ನೀಡಿ, ಮನವಿ ಸಲ್ಲಿಸಲು ನರ‍್ಧರಿಸಲಾಯಿತು.
ನಗರದ ಗುತ್ತಿಗೆದಾರರ ಭವನದಲ್ಲಿ ಮಂಗಳವಾರ ರ‍್ಪಡಿಸಿದ್ದ ಕಲ್ಯಾಣ ರ‍್ನಾಟಕ ಭಾಗದ ಗುತ್ತಿಗೆದಾರರ ಸಂದ ಸಭೆಯಲ್ಲಿ ಮಾತನಾಡಿದ ಗುತ್ತಿಗೆದಾರರು, ಲ್ಯಾಂಡ್ ರ‍್ಮಿ, ನರ‍್ಮಿತಿ ಕೇಂದ್ರ ಸೇರಿ ಇತರೆ ಸಂಸ್ಥೆಗಳ ಕಾಮಗಾರಿ ಕಳಪೆಯಾಗಿದ್ದು, ಶಾಸಕರಿಗೆ ಶೇ.೧೫ರಿಂದ ಶೇ.೨೦ ಕಮೀಷನ್ ನೀಡಿ, ಕಾಮಗಾರಿ ಪಡೆಯುತ್ತಿದ್ದಾರೆ. ಇದಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಬೇಕು ಎಂದು ರ‍್ನಿಣಯಿಸಿದರು.
ಎಲ್ಲ ಇಲಾಖೆಗಳಲ್ಲಿ ಮಾಡುತ್ತಿರುವ ಪ್ಯಾಕೇಜ್ ಪದ್ಧತಿ ಕೈ ಬಿಡಬೇಕು, ಮಹಾನಗರ ಪಾಲಿಕೆಯ ಮಹಾತ್ಮ ಗಾಂಧಿಜಿ ನಗರ ಯೋಜನೆ ವಿಕಾಸ ಪ್ಯಾಕೇಜ್ ಪದ್ಧತಿ ತೆಗೆಯಬೇಕು, ೫೦ ಲಕ್ಷ ರೂ.ವರೆಗಿನ ಕಾಮಗಾರಿಗಳಲ್ಲಿ ಶಾಸಕರ ಹಸ್ತಕ್ಷೇಪ ಇರಬಾರದು, ಕೆಕೆಆರ್ಡಿಬಿಯ ಶೇ.೮೦ ಕಾಮಗಾರಿ ಗುತ್ತಿಗೆದಾರರಿಗೆ ನೀಡಬೇಕು, ಶೇ.೨೦ ಲ್ಯಾಂಡ್ ರ‍್ಮಿ, ನರ‍್ಮಿತಿ ಕೇಂದ್ರದವರಿಗೆ ನೀಡಬೇಕು, ಕಾಮಗಾರಿ ಕಳಪೆ ಎಂದು ದೂರು ನೀಡುವ ಸಂಟನೆಗಳವರಿಂದ ಶೇ.೫ ಹಣ ಮುಂಗಡ ಪಡೆದು, ತಪಾಸಣೆ ನಡೆಸಬೇಕು, ಸೂಚಿಸಿದ ಅವಧಿಯಲ್ಲಿ ಟೆಂಡರ್ ಪರ‍್ಣಗೊಳಿಸಬೇಕು ಎಂಬ ಬೇಡಿಕೆಗಳನ್ನು ಸಿಎಂಗೆ ಮನವಿ ಸಲ್ಲಿಸಲು ನರ‍್ಧರಿಸಿದರು.
ಸಂಟನೆ ಬಲರ‍್ಧನೆ: ಗುತ್ತಿಗೆದಾರರಿಗೆ ಶಾಸಕರು ತುಳಿಯುತ್ತಿದ್ದು, ಉದ್ದೇಶಪರ‍್ವಕವಾಗಿ ಕಾಮಗಾರಿಗಳನ್ನು ತಪ್ಪಿಸುತ್ತಿದ್ದಾರೆ. ಲ್ಯಾಂಡ್ ರ‍್ಮಿ, ನರ‍್ಮಿತಿ ಕೇಂದ್ರದಲ್ಲಿ ಅವರಿಗೆ ಬೇಕಾದಷ್ಟು ಕಮೀಷನ್ ನೀಡುವ ಅಧಿಕಾರಿಗಳಿದ್ದು, ಟೆಂಡರ್ನಲ್ಲೂ ಗೋಲ್ಮಾಲ್ ಮಾಡಿ, ಅನ್ಯಾಯ ಮಾಡುತ್ತಿದ್ದಾರೆ. ಕಳಪೆ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆದಾರರಿಗೆ ಮೋಸವಾಗುತ್ತಿದೆ. ಆದ್ದರಿಂದ ಗುತ್ತಿಗೆದಾರರ ಸಂಟನೆ ಇನ್ನಷ್ಟು ಬಲಪಡಿಸಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಸಂದ ಜಿಲ್ಲಾಧ್ಯಕ್ಷ ಜಗನ್ನಾಥ ಶೇಗಜಿ, ಸಂಜಯ ಆರ್.ಕೆ, ಮೋಸಿನ್ ಪಟೇಲ್, ಬಸವರಾಜ ಸಜ್ಜನ, ರಿಯಾಜ್ ಪಟೇಲ್, ಸಿರಾಜ್ ಪಟೇಲ್, ರಾಯಚೂರು ಜಿಲ್ಲಾಧ್ಯಕ್ಷ ಬಿ.ಮಲ್ಲಿಕರ‍್ಜುನ, ದರ‍್ಗಪ್ಪ, ರಮಣಾರಡ್ಡಿ, ಕೆ.ಸಿ.ರಡ್ಡಿ ಇತರರಿದ್ದರು.