ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲು ಎಚ್ಚರಿಕೆ

IMG-20230702-WA0006--0005
Published on

ಚಿತ್ರದುರ್ಗ: ಜಲಜೀವನ್‌ಮಿಷನ್ ಹಾಗೂ ಬಹು ಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಗಳು ಕಳಪೆಯಾಗಿದ್ದರೆ ಹಾಗೂ ಕಾಮಗಾ ರಿಗಳ ವೇಳೆ ಅಗೆದಿರುವ ರಸ್ತೆಗಳನ್ನು ಸೂಕ್ತ ರೀತಿಯಲ್ಲಿ ಸರಿಪಡಿಸದಿದ್ದರೆ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಾಗಿಸಲಾಗುವುದು ಎಂ ದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.

ಜಿಪಂದಲ್ಲಿ ಶನಿವಾರ ಏರ್ಪಡಿಸಿದ್ದ ಜಲಜೀವನ್‌ಮಿಷನ್,ಬಹುಗ್ರಾಮ ಕುಡಿಯುವ ನೀರು ಯೋಜನೆ ಪ್ರಗತಿ ಪರಶೀಲನಾ ಸಭೆಯ ಲ್ಲಿ ಮಾತನಾಡಿ, ಸಿಇಒ ಅವರೊಂದಿಗೆ ನಾನು ಸ್ಥಳ ಪರಿಶೀಲನೆ ನಡೆಸುತ್ತೇನೆ. ನಿರ್ದಿಷ್ಟ ಅವಧಿಯೊಳಗೆ ಗುಣಮಟ್ಟದೊಂದಿಗೆ ಕಾಮಗಾ ರಿಗಳನ್ನು ಪೂರ್ಣಗೊಳಿಸಬೇಕು.
ಚಳ್ಳಕೆರೆ,ಪಾವಗಡ, ಮೊಳ ಕಾಲ್ಮೂರು ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆ ಕಾ ಮಗಾರಿ ಪ್ರಗತಿಯಲ್ಲಿದೆ.

ಕಾಮಗಾರಿಗಳ ಅನುಷ್ಠಾನಕ್ಕಾಗಿ ಅಗೆದಿರುವ ರಸ್ತೆಗಳನ್ನು ಸರಿಪಡಿಸಬೇಕು ಮತ್ತು ಕಾಮಗಾರಿಗಳು ಗುಣ ಮಟ್ಟ ದಿಂದ ಕೂಡಿರಬೇಕು. ಈ ಕುರಿತಂತೆ ಒಂದು ವಾರದೊಳಗೆ ಮಾಹಿತಿ ನೀಡುವಂತೆ ಸಿಇಒ ಎಂ.ಎಸ್.ದಿವಾಕರ್‌ಗೆ ಸೂಚಿಸಿದರು.

ದಿವಾಕರ್ ಮಾತನಾಡಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕೆಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಅಧಿಕಾರಿಗಳಾದ ಶರಣಪ್ಪ ಬುಗುಟಿ,ದಯಾನಂದಸ್ವಾಮಿ,ಶಿವಕುಮಾರ್,ಪಾತಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net