ಗುತ್ತಿಗೆದಾರರ ಬೇಡಿಕೆಗಳಿಗೆ ಸ್ಪಂದಿಸಿ

1812Klb01
Published on

ಕಲಬುರಗಿ: ಲೋಕೋಪಯೋಗಿ ಇಲಾಖೆ ಪಂಚಾಯತ್ ರಾಜ್ ಇಂಜಿನೀಯರಿAಗ್ ಮತ್ತು ಎಲ್ಲ ವಿಭಾಗಗಳಲ್ಲಿ ರಸ್ತೆ ಕಾಮಗಾರಿಗೆ ಐದು ವರ್ಷ ನಿರ್ವಹಣೆಯನ್ನು ಟೆಂಡರ್ ಕರಾರಿನಲ್ಲಿ ಸೇರಿಸಿರುವುದು ರದ್ದುಪಡಿಸಬೇಕು, ಕೆಕೆಆರ್‌ಡಿಬಿಯಲ್ಲಿ ಇಲಾಖೆ ಸಮಸ್ಯೆಯಿಂದ ಕಾಮಗಾರಿ ವಿಳಂಬವಾದರೂ ದಂಡ ವಿಧಿಸುವುದು ಕೈಬಿಡಬೇಕು, ಡಿಎಂಎಫ್ ಅಡಿ ಮಾಡಿದ ಎಲ್ಲ ಬಿಲ್ ಪಾವತಿ ಬೇಗ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಗುತ್ತಿಗೆದಾರರು ಮಂಡಿಸಿದರು.

ನಗರದ ಖಾಸಗಿ ಉದ್ಯಾನದಲ್ಲಿ ಸೋಮವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ ಮಂಡಳಿ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಗುತ್ತಿಗೆದಾರರ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಜೆಜೆಎಂ ಕಾಮಗಾರಿಯಲ್ಲಿ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸಬೇಕು, ಜಿಎಸ್‌ಟಿ ಹಣ ಗುತ್ತಿಗೆದಾರರಿಗೆ ಪಾವತಿಯಾಗುವ ವ್ಯವಸ್ಥೆ ಮಾಡಬೇಕು, ಪ್ರಕೃತಿ ವಿಕೋಪ ಕಾಮಗಾರಿಗಳನ್ನು ಜರೂರಿ ಎಂದು ಮಾಡಿಸಿಕೊಂಡು ಬಿಲ್ ಪಾವತಿಸದಿರುವುದು ಸರಿಯಲ್ಲ. ಶೀಘ್ರ ಬಿಲ್ ಪಾವತಿಸಬೇಕು, ಕೆಕೆಆರ್‌ಡಿಬಿ ಮೈಕ್ರೋ ಅನುದಾನದ ಅಡಿ ಆರು ತಿಂಗಳಿAದ ನಡೆದ ಟೆಂಡರ್‌ಗಳ ಕರಾರು ಒಪ್ಪಂದ ಮಾಡಬೇಕು ಎಂದು ಆಗ್ರಹಿಸಿದರು. ಬಾಕಿ ಉಳಿದ ಬಿಲ್ ಪಾವತಿಸಬೇಕು, ಬಿಡಿಬಿಡಿಯಾಗಿ ಟೆಂಡರ್ ಕರೆಯಬೇಕು ಎಂದು ಆಗ್ರಹಿಸಿದರು.

ಎಲ್ಲ ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರದ, ಆಡಳಿತ ಗಮನಕ್ಕೆ ತರಬೇಕು. ಇಲ್ಲದಿದ್ದರೆ ಹಂತ ಹಂತವಾಗಿ ಹೋರಾಟ ಮಾಡುವ ಕುರಿತು ತೀರ್ಮಾನಿಸಲಾಯಿತು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಯಿತು. ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಶೇಗಜಿ, ಪ್ರಧಾನ ಕಾರ್ಯದರ್ಶಿ ಸಂಜಯ್ ಆರ್.ಕೆ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net