ಗುತ್ತಿಗೆದಾರ ವಿರುದ್ಧ ಚವ್ಹಾಣ್ ಆಕ್ರೋಶ

mungnal
Published on

ಔರಾದ್: ಶಾಸಕ ಪ್ರಭು ಚವ್ಹಾಣ್ ನಿರ್ಮಾಣ ಹಂತದಲ್ಲಿರುವ ಮುಂಗನಾಳ-ಬೆಲ್ದಾಳ ರಸ್ತೆ ಕಾಮಗಾರಿ ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದರು.
ರಸ್ತೆಯಲ್ಲಿ ಸಂಚರಿಸಿ ಗುಣಮಟ್ಟ ವೀಕ್ಷಿಸಿದ ಅವರು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಆಗದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಕೆಲಸದ ಗುಣಮಟ್ಟದ ಬಗ್ಗೆ ಸ್ಥಳೀಯರಿಂದ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ವಿಳಂಬವಾಗಿ ಕೆಲಸ ಆರಂಭಿಸಲಾಗಿದೆ. ಆದರೂ ಕಾಮಗಾರಿ ಸರಿಯಾದ ರೀತಿಯಲ್ಲಿ ನಡೆಯದಿರುವುದಕ್ಕೆ ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ರಸ್ತೆಯಿಂದ ಬೆಲ್ದಾಳ, ಬರ್ದಾಪುರ, ಕೊಳ್ಳುರ್, ಏಕಲಾರ, ತುಳಜಾಪುರ, ಬೋರಾಳ, ಮುಂಗನಾಳ ಸೇರಿ ಸಾಕಷ್ಟು ಹಳ್ಳಿಗಳಿಗೆ ಅನುಕೂಲವಾಗಲಿದೆ. ಕೆಲಸದ ಬಗ್ಗೆ ಸ್ಥಳೀಯರು ದೂರು ನೀಡಿದಾಗ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಜನತೆಗೆ ಉತ್ತಮವಾದ ರಸ್ತೆ ನಿರ್ಮಿಸಿಕೊಡಬೇಕು ಎಂದು ಚವ್ಹಾಣ್ ಹೇಳಿದರು.
ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಾಕಷ್ಟು ಪ್ರಯತ್ನಪಟ್ಟು ಸರ್ಕಾರದಿಂದ ಅನುದಾನ ತಂದು ರಸ್ತೆಗಳನ್ನು ನಿಮರ್ಿಸಲಾಗುತ್ತಿದೆ. ರಸ್ತೆ ಸರಿಯಿದ್ದರೆ ಮಾತ್ರ ಜನತೆ ಸುಲಭವಾಗಿ ಸಂಚರಿಸಬಹುದು. ತಮ್ಮ ಕೆಲಸ ಕಾರ್ಯ ಮತ್ತು ವ್ಯವಹಾರಗಳನ್ನು ಅಡೆತಡೆಗಳಿಲ್ಲದೆ ಮಾಡಿಕೊಳ್ಳಬಹುದು. ಹೀಗಾಗಿ ಗುಣಮಟ್ಟದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಹಿಸುವುದಿಲ್ಲ ಎಂದು ಗುಡುಗಿದರು.
ಅಧಿಕಾರಿಗಳು ಗುತ್ತಿಗೆದಾರರಿಗೆ ಕೆಲಸ ವಹಿಸಿ ಸುಮ್ಮನಿದ್ದರೆ ಸಾಲದು. ಕಾಮಗಾರಿ ಬಳಕೆಗೆ ಬರುವವರೆಗೆ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ದೂರುಗಳಿಗೆ ಆಸ್ಪದ ನೀಡದಂತೆ ಕೆಲಸವಾಗಬೇಕು. ಕೆಲಸ ಪೂರ್ಣಗೊಂಡ ನಂತರ ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ಅಕಾರಿಗಳು ಮತ್ತು ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೋಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಸಚಿನ್ ರಾಠೋಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net