

ಕಲಬುರಗಿ: ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಮಸ್ಯೆಗೆ ಸ್ಪಂದಿಸುವುದಾಗಿ ಶಾಸಕ ಅಲ್ಲಮಪ್ರಭು ಪಾಟೀಲ್ ಭರವಸೆ ನೀಡಿದರು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘವು ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಂಸ್ಕಾರದ ಆಶಯ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ನೌಕರರನ್ನಾಗಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಬಾಕಿ ಇದೆ. ವೇತನ ಪರಿಷ್ಕಕರಣೆ ಕುರಿತು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್‌ಸಿಂಗ್ ಮೀನಾ, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಶ್ರೀಕಾಂತ ಸ್ವಾಮಿ, ಕೆಎಸ್‌ಎಚ್‌ಸಿಒಇಎ ಸಂಸ್ಥಾಪಕ ಅಧ್ಯಕ್ಷ ವಿಶ್ವಾರಾಧ್ಯ ಯಾಮೋಜಿ, ಶಂಕರ ಸುಲೇಗಾಂವ, ವೆಂಕಟೇಶ ಸಿಂದಿಹಟ್ಟಿ, ಇಂದ್ರೇಶ, ರಮೇಶ ಸುಂಬಡ, ಡಿಎಚ್‌ಒ ಡಾ.ರಾಜಶೇಖರ ಮಾಲಿ, ಡಾ.ಪ್ರಭುಲಿಂಗ ಮಾನಕರ್, ಡಾ.ಸಂಧ್ಯಾ ಕಾನೇಕರ್, ಡಾ.ಅಂಬಾರಾಯ ರುದ್ರವಾಡಿ, ಡಾ.ರವಿಕಾಂತ, ಡಾ.ಶರಣಬಸಪ್ಪ ಕ್ಯಾತನಾಳ, ಡಾ.ಸುರೇಶ ಮೇಕಿನ, ಡಾ.ರಾಜಕುಮಾರ ಕುಲಕರ್ಣಿ, ಡಾ.ಚಂದ್ರಕಾAತ ನರಿಬೋಳ, ಡಾ.ಶರಣಬಸಪ್ಪ ಭೂಸನೂರ, ಗೀತಾ ಕುಲಕರ್ಣಿ ಇತರರಿದ್ದರು.