

ಭದ್ರಾವತಿ: ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಶನಿವಾರ ಗುತ್ತಿಗೆ ಕಾರ್ಮಿಕರ ಸಹಾಯ ಕೇಂದ್ರ ಹಾಗೂ ಆನ್‌ಲೈನ್ ಗೇಟ್ ಎಂಟ್ರಿ ಸಿಸ್ಟಂಗೆ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ ಚಾಲನೆ ನೀಡಿದರು.
ಗುತ್ತಿಗೆ ಕಾರ್ಮಿಕರ ಸಮಸ್ಯೆಗಳು, ಕುಂದುಕೊರತೆಗಳನ್ನು ಸಮಯಕ್ಕೆ ಅನುಗುಣವಾಗಿ ನಿವಾರಣೆ ಮಾಡುವ ಸಲುವಾಗಿ ಸಹಾಯ ಕೇಂದ್ರ ತೆರೆಯಲಾಗಿದೆ. ಇದರ ಮೇಲ್ವಿಚಾರಣೆಯನ್ನು ವಿಐಎಸ್‌ಎಲ್ ಮಾನವ ಸಂಪನ್ಮೂಲ ಇಲಾಖೆ ನಿರ್ವಹಿಸುತ್ತದೆ. ವಿಐಎಸ್‌ಎಲ್ ನಲ್ಲಿ ಸಾಕಷ್ಟು ವ್ಯವಸ್ಥೆಗಳ ಸುಧಾರಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆೆ. ಎಲ್ಲ ಹಂತಗಳಲ್ಲಿಯೂ ಕೆಲಸ ಮಾಡುವುದನ್ನು ಇಂತಹ ವ್ಯವಸ್ಥೆಗಳು ಸುಲಭಗೊಳಿಸುತ್ತವೆ ಹಾಗೂ ಸರಳೀಕರಣಗೊಳಿಸಲು ಇದು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಸ್ಥಾವರ ಮುಖ್ಯ ಮಹಾ ಪ್ರಬಂಧಕ ಕೆ.ಎಸ್.ಸುರೇಶ್, ಸುರಕ್ಷತೆ ಮತ್ತು ಅಗ್ನಿಶಾಮಕ ಸೇವೆ ಮಹಾಪ್ರಬಂಧಕ ಹರಿಶಂಕರ್, ಮಹಾಪ್ರಬಂಧಕ ಟಿ.ರವಿಚಂದ್ರನ್, ಪಿಆರ್‌ಒ ಪ್ರವೀಣ್‌ಕುಮಾರ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಅಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿಕಾಸ್ ಬಸೇರ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಇತರರಿದ್ದರು.