ಗುತ್ತಲ ದಸರಾ ಉತ್ಸವಕ್ಕೆ ಚಾಲನೆ

17GTL1A
Published on

ವಿಜಯವಾಣಿ ಸುದ್ದಿಜಾಲ ಗುತ್ತಲ

ಪ್ರಪಂಚಕ್ಕೆ ಮಾರಕವಾಗಿರುವ ಕರೊನಾ ಮಹಾಮಾರಿಯಿಂದ ಎಲ್ಲರನ್ನೂ ಕಾಪಾಡಲೆಂದು ದುರ್ಗಾ ದೇವಿಯಲ್ಲಿ ಪ್ರಾರ್ಥಿಸೋಣ ಎಂದು ಕಲ್ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ಶನಿವಾರ ಸಂಜೆ ಆಯೋಜಿಸಿದ್ದ ಗುತ್ತಲ ದಸರಾ ಉತ್ಸವದಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಗುತ್ತಲ ದಸರಾ ಕಾರ್ಯಕ್ರಮದಲ್ಲಿ ದೇವಿಯನ್ನು ಅಂಬಾರಿಯಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಹಿಂದು ಧರ್ವಿುಯರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ದಸರಾವನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಮ್ಮಲ್ಲಿರುವ ದುಷ್ಟತನವನ್ನು ಹೋಗಲಾಡಿಸಬೇಕಿದೆ ಎಂದರು.

ಪಟ್ಟಣದ ಪೊಲೀಸ್ ಠಾಣೆಯಿಂದ ವಿವಿಧ ವಾದ್ಯಗಳ ಮೂಲಕ ಅಲಂಕೃತ ಮಂಟಪದಲ್ಲಿ ದುರ್ಗಾ ದೇವಿಯನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಮಾಡಲಾಯಿತು. ಕರೊನಾ ಸೇನಾನಿಗಳಾದ ಪೌರ ಕಾರ್ವಿುಕ ಉಚ್ಚಂಗೆಪ್ಪ ರಾಮಣ್ಣನವರ, ಆಶಾ ಕಾರ್ಯಕರ್ತೆ ಈರಮ್ಮ ಅಳವಂಡಿ, ಆರೋಗ್ಯ ಸಿಬ್ಬಂದಿ ಚನ್ನಬಸವ ಕನವಳ್ಳಿ, ಕೈಲಾಸ ವಾಹಿನಿ, ಚಾಲಕ ಅಜ್ಜಪ್ಪ ಅಗಿಸಿಬಾಗಿಲದ, ಪೊಲೀಸ್ ಪೇದೆ ಬ್ಯಾಳಿ ಅವರು ಮಹೋತ್ಸವಕ್ಕೆ ಚಾಲನೆ ನೀಡಿದರು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ಚನ್ನಪ್ಪ ಕಲಾಲ ಅಧ್ಯಕ್ಷತೆ ವಹಿಸಿದ್ದರು. ಪಿಎಸ್​ಐ ಸಿದ್ಧಾರೂಢ ಬಡಿಗೇರ, ಪ.ಪಂ. ಸದಸ್ಯರಾದ ನಾಗರಾಜ ಎರಿಮನಿ, ರಮೇಶ ಮಠದ, ಕೋಟೆಪ್ಪ ಬನ್ನಿಮಟ್ಟಿ, ಲಿಂಗೇಶ ಬೆನ್ನೂರ, ದಸರಾ ಉತ್ಸವ ಸಮಿತಿ, ಹಿಂದು ಜಾಗರಣ ವೇದಿಕೆ, ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಸದಸ್ಯರು, ಪಟ್ಟಣ ಹಾಗೂ ಸುತ್ತಲಿನ ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಸಾರ ಉತ್ಸವ ಸಮಿತಿ ಕಾರ್ಯದರ್ಶಿ ಪ್ರದೀಪ ಸಾಲಗೇರಿ ಪ್ರಸ್ತಾವಿಕವಾಗಿ ಮಾತನಾಡಿದರು. ಎಂ.ಬಿ. ಕೋಡಬಾಳ, ವಿ.ಎಂ. ಗಡ್ಡದೇವರಮಠ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net