ಗುಣಮುಖರಾದ ಮೂರು ಸೋಂಕಿತರು ಬಿಡುಗಡೆ

B SHARAT DC Photo
Published on

ಕಲಬುರಗಿ: ಕರೊನಾ ಸೋಂಕಿಗೆ ತುತ್ತಾಗಿ ಇಎಸ್ಐಸಿ ಐಸೋಲೇಷನ್ ವಾಡರ್್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಹಾಬಾದ್ನ ಇಬ್ಬರು ಮತ್ತು ಕಲಬುರಗಿ ನಗರದ ಒಬ್ಬ ರೋಗಿ ಗುಣಮುಖ ಹೊಂದಿದ್ದರಿಂದ ಗುರುವಾರ ತಡರಾತ್ರಿ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ದೆಹಲಿ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದಿದ್ದ ಶಹಾಬಾದ್ನ ಅಪ್ಪರ್ ಮಡ್ಡಿ ಪ್ರದೇಶದ ವ್ಯಕ್ತಿಯ 60 ವರ್ಷದ ಪತ್ನಿ (ಪಿ124) ಮತ್ತು ಈಕೆಯ 28 ವರ್ಷದ ಸೊಸೆ (ಪಿ 174) ಹಾಗೂ ಕಲಬುರಗಿ ಖಮರ್ ಕಾಲನಿಯ 72 ವರ್ಷದ ಮಹಿಳೆ(ಪಿ178) ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಪಿ 124 ಏಪ್ರಿಲ್ 2, ಪಿ174 ಏ.7 ಹಾಗೂ ಪಿ178 ಏ.8ರಂದು ಕರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಜಿಲ್ಲೆಯಲ್ಲಿ ಈವರೆಗೆ ಕರೊನಾ ಪಾಸಿಟಿವ್ ಪತ್ತೆಯಾದ 36ರಲ್ಲಿ 6 ರೋಗಿಗಳು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ನಾಲ್ವರು ಮೃತಪಟ್ಟಿದ್ದು, 26 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
26 ಪ್ರಕರಣ ಸಕ್ರಿಯ: ಜಿಲ್ಲೆಯಲ್ಲಿ ಈವರೆಗೆ 2745 ಶಂಕಿತರ ರಕ್ತ, ಗಂಟಲು ದ್ರವ ಟೆಸ್ಟ್ಗೆ ಕಳುಹಿಸಲಾಗಿದೆ. ಈ ಪೈಕಿ 36 ಪಾಸಿಟಿವ್ ಬಂದಿದ್ದು, ಇದರಲ್ಲಿ ಆರು ಜನ ಗುಣಮಖರಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದು, 26 ಪ್ರಕರಣ ಸಕ್ರಿಯವಾಗಿವೆ. 2058 ನೆಗೆಟಿವ್ ರಿಪೋರ್ಟ್​ ಬಂದಿದೆ. 651 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ವಾರ್ಡ್​ 14, 30 ಮತ್ತು ಶಹಾಬಾದ್ ಸೇರಿ 18 ಕಂಟೈನ್ಮೆಂಟ್ ಜೋನ್ಗಳಲ್ಲಿ 40574 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್.ಬಿ ತಿಳಿಸಿದ್ದಾರೆ. ಪ್ರೈಮರಿ ಕಾಂಟ್ಯಾಕ್ಟ್ಸ್ 645, ಸೆಕೆಂಡರಿ ಕಾಂಟ್ಯಾಕ್ಟ್ಸ್ 2314, ವಿದೇಶದಿಂದ ಬಂದ 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 1926 ಜನರನ್ನು ಇರಿಸಿದ್ದು, 28 ದಿನ ಹೋಂ ಕ್ವಾರಂಟೈನ್ನಲ್ಲಿದ್ದ 981 ಹಾಗೂ 14 ದಿನದ ಅವಧಿ ಮುಗಿಸಿದ 331 ಜನರನ್ನು ಮುಕ್ತಗೊಳಿಸಲಾಗಿದೆ. 258 ಜನರನ್ನು ಇಎಸ್ಐಸಿ ಐಸೋಲೇಷನ್ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net