

ಬೆಟ್ಟದಪುರ: ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದು ಮೈಮುಲ್ ವಿಸ್ತರಣಾಧಿಕಾರಿ ಕೆ.ಆರ್.ಆಕಾಶ್ ಸಲಹೆ ನೀಡಿದರು.
ಬೆಟ್ಟದಪುರ ಸಮೀಪದ ಗಂಗನಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸೋಮವಾರ ಆಯೋಜಿಸಿದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘದ ಪ್ರತಿಯೊಬ್ಬ ಸದಸ್ಯರೂ ಮೈಮುಲ್‌ನಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಲ್ಲದೆ ಸಂಘದ ವತಿಯಿಂದ ನೀಡಲಾಗುತ್ತಿರುವ ವಿಮೆ ಸೌಲಭ್ಯ ಪ್ರಯೋಜನೆ ಪಡೆಯಬೇಕು. ಗಂಗನಕುಪ್ಪೆ ಡೇರಿಯು 2022-23ನೇ ಸಾಲಿನಲ್ಲಿ 1,18 ಲಕ್ಷ ರೂ. ಲಾಭ ಗಳಸಿದೆ ಎಂದು ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷ ಪುಟ್ಟಮಾದೇಗೌಡ, ನಿರ್ದೇಶಕರಾದ ಪ್ರಕಾಶ್, ಕಮಲಮ್ಮ, ಹೇಮೇಶ, ಯೋಗೇಶ, ಶಂಕರೇಗೌಡ, ಪುಟ್ಟಸ್ವಾಮಯ್ಯ, ಮುಕುಂದ, ಗಣೇಶನಾಯ್ಕ, ಸುಂದರಮ್ಮ, ಗ್ರಾ.ಪಂ. ಸದಸ್ಯ ಚತುರ, ಮೈಮುಲ್ ಅಧಿಕಾರಿಗಳಾದ ರಾಜಶೇಖರ್, ತೇಜಸ್, ಮುಖಂಡರಾದ ಲಕ್ಕೇಗೌಡ, ನಾಗರಾಜು, ಚಂದ್ರೇಗೌಡ, ಕಾರ್ಯದರ್ಶಿ ಮಹದೇವ, ಹಾಲು ಪರೀಕ್ಷ ಮಂಜೇಗೌಡ ಇತರರು ಇದ್ದರು.