

ಚಾಮರಾಜನಗರ: ಹಾಲು ಉತ್ಪಾದಕರ ಸಹಕಾರ ಸಂಘವು ಸಂಘದ ಸದಸ್ಯರ ಶ್ರಮ ಹಾಗೂ ಗುಣಮಟ್ಟದ ಹಾಲು ಪೂರೈಕೆ ಮಾಡುತ್ತಿರುವುದರಿಂದ ಲಾಭ ದೊರೆಯುತ್ತಿದೆ ಎಂದು ವೆಂಕಟಯ್ಯನ ಛತ್ರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರೂ ಆಗಿರುವ ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು ತಿಳಿಸಿದರು.
ಗ್ರಾಮದ ಡೇರಿ ಮುಂಭಾಗದಲ್ಲಿ ಸೋಮವಾರ ಆಯೋಜಿಸಿದ್ದ 2025ರ ನೂತನ ದಿನದರ್ಶಿಕೆಯನ್ನು ಬಿಡುಗಡೆ ಮತ್ತು ಜಾನುವಾರು ಪೋಷಣ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಅರ್ಥಿಕ ಅಭಿವೃದ್ಧಿಯನ್ನು ಹೊಂದಿ ಸರ್ಕಾರ ಹಾಗೂ ಒಕ್ಕೂಟದ ಸವಲತ್ತುಗಳನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು. ರೈತರಿಗೆ ಜಾನುವಾರುಗಳು ನಿತ್ರಾಣಗೊಂಡ ನಂತರ ಆರೈಕೆ ಮಾಡುವುದು ಕಷ್ಟವಾಗುತಿತ್ತು. ಈ ಹಿನ್ನೆಲೆಯಲ್ಲಿ ಡೇರಿಯಿಂದಲೇ ಯಂತ್ರವನ್ನು ಖರೀದಿ ಮಾಡಿ ಇಂದು ಚಾಲನೆ ನೀಡಿದ್ದೇವೆ ಎಂದರು.
ಸಂಘದ ಉಪಾಧ್ಯಕ್ಷ ವಿ.ಪದ್ಮರಾಜ್, ಚಾಮುಲ್ ಸಹಾಯಕ ವಿಸ್ತಾರಣಾಧಿಕಾರಿ ಭಾಗ್ಯರಾಜ್, ನಿರ್ದೇಶಕರಾದ ಶಿವರಾಜು, ಸಂಪತ್ಕುಮಾರ್, ಎನ್.ಮಹದೇವಸ್ವಾಮಿ, ಮಹದೇವಸ್ವಾಮಿ ಬಿ.ಎನ್. ನಾಗರಾಜು ವಿ.ಬಿ.ಕೃಷ್ಣೇಗೌಡ, ಬಂಗಾರು, ರೇಣುಕಾ, ಜಯಮ್ಮ, ಡೇರಿ ಕಾರ್ಯನಿರ್ವಾಹಕ ಅಧಿಕಾರಿ ಪುನೀತ್, ಸಿಬ್ಬಂದಿ ಮನು, ಮನೋಹರ, ಸುನಂದ, ಮನು ಇದ್ದರು.