

ಚಿತ್ರದುರ್ಗ: ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ವೃತ್ತಿಪರ ಸಾಮರ್ಥ್ಯ ಅಭಿವೃದ್ಧಿ ತರಬೇತಿಗಳು ಸಹಕಾರಿಯಾಗಿವೆ ಎಂದು ಡಯಟ್ ಉಪನ್ಯಾಸಕ ಎಸ್. ಬಸವರಾಜು ಹೇಳಿದರು.
ಡಯಟ್‌ನಲ್ಲಿ ಎಸ್‌ಆರ್‌ಎಸ್ ಬಿಇಡಿ ಕಾಲೇಜು ಪ್ರಶಿಕ್ಷಣಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಡಯಟ್ ಸಂಸ್ಥೆ ಪಾತ್ರ ಕುರಿತು ಶುಕ್ರವಾರ ಆಯೋಜಿಸಿದ್ದ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಶಿಕ್ಷಕರು ಆಳವಾದ ವಿಷಯ ಜ್ಞಾನದೊಂದಿಗೆ ವಿವಿಧ ಬೋಧನಾ ಕೌಶಲಗಳಲ್ಲಿ ಸಾಮರ್ಥ್ಯ ಪಡೆಯುವ ಮೂಲಕ ಪಠ್ಯ ವಿಷಯವನ್ನು ಆಸಕ್ತಿದಾಯಕವಾಗಿ ಬೋಧಿಸಬೇಕೆಂದರು.
ಉಪನ್ಯಾಸಕರಾದ ಸಿ.ಎಸ್. ಲೀಲಾವತಿ, ಬಿ.ಎಸ್. ನಿತ್ಯಾನಂದ, ಯು. ಸಿದ್ದೇಶಿ ಮಾತನಾಡಿದರು. ಪ್ರಾಚಾರ್ಯ ಎಂ. ನಾಸಿರುದ್ದೀನ್, ಡಿವೈಪಿಸಿ ವೆಂಕಟೇಶಪ್ಪ, ಉಪನ್ಯಾಸಕರಾದ ಆರ್. ನಾಗರಾಜು, ವಿ. ಕನಕಮ್ಮ, ತಾಂತ್ರಿಕ ಸಹಾಯಕ ಅವಿನಾಶ್, ಎಸ್‌ಆರ್‌ಎಸ್ ಬಿ.ಇಡಿ ಕಾಲೇಜು ಉಪನ್ಯಾಸಕರಾದ ರವಿಕುಮಾರ್, ಟಿ. ಕಲ್ಲಪ್ಪ ಇತರರು ಇದ್ದರು.