ಗುಣಮಟ್ಟದ ಶಿಕ್ಷಣಕ್ಕೆ ಐಇಟಿಇ ಕಾರ್ಯಕ್ರಮಗಳು ಪೂರಕ

ctd sjmmmm
Published on

ಚಿತ್ರದುರ್ಗ: ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಐಇಟಿಇ ವಿದ್ಯಾರ್ಥಿ ವೇದಿಕೆಗೆ ಚಾಲನೆ ನೀಡಲಾಯಿತು.

ವೇದಿಕೆ ಉದ್ಘಾಟಿಸಿದ ಪ್ರಾಚಾರ್ಯ ಡಾ.ಪಿ.ಬಿ. ಭರತ್ ಮಾತನಾಡಿ, ಇಂಜಿನಿಯರಿಂಗ್ ಶಿಕ್ಷಣದ ಗುಣಮಟ್ಟ ಸುಧಾರಣೆ ನಿಟ್ಟಿನಿಲ್ಲಿ ನೆರವಾಗಲಿರುವ ಈ ವೇದಿಕೆಯ ಪಠ್ಯೇತರ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಶಿವಮೊಗ್ಗ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ.ಪಿ. ಮಂಜುನಾಥ್, ಐಕ್ಯುಎಸಿ ಸಂಚಾಲಕ ಡಾ.ಎಂ.ಎ. ರಾಜೇಶ್ ಮಾತನಾಡಿದರು. ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ.ಬಿ.ಜಿ. ಕುಮಾರಸ್ವಾಮಿ, ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಕೆ.ಬಿ. ಸಿದ್ದೇಶ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್. ಕೃಷ್ಣಾರೆಡ್ಡಿ, ಐಎಸ್‌ಎಫ್ ಸಂಚಾಲಕ ಪ್ರೊ. ಮಧುಕುಮಾರ್ ದಾವಣಗೆರೆ, ಪ್ರೊ.ಎಸ್. ರೂಪಾ, ಪ್ರೊ.ಎನ್. ಪವಿತ್ರಾ ಇತರರಿದ್ದರು. ಪಿ.ಕೆ. ಪ್ರಣತಿ ಪ್ರಾರ್ಥಿಸಿ, ಅನುಷಾ ಸ್ವಾಗತಿಸಿ, ಬಿ.ಬಿ. ಹಾಜಿರ, ರಚನಾ ನಿರೂಪಿಸಿದರು. ವಿ.ಎಂ. ಪ್ರೀತಿ ವಂದಿಸಿದರು.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net