ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ

school bulding opening
ನವನಗರದ ಸೆಕ್ಟರ್ ನಂಬರ್ 110 ರಲ್ಲಿರುವ ವಿದ್ಯಾ ಪ್ರಸಾರಕ ಮಂಡಳದ ಅಮೃತ ಇಂಟರ್ ನ್ಯಾಷನಲ್ ಸ್ಕೂಲ್ ನೂತನ ಕಟ್ಟಡವನ್ನು ಶಾಸಕ ಎಚ್.ವೈ. ಮೇಟಿ ಉದ್ಘಾಟಿಸಿದರು.ವಿದ್ಯಾ ಪ್ರಸಾರಕ ಮಂಡಳ ಅಧ್ಯಕ್ಷ ಸಿ.ಎನ್. ದಾಸ, ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ್, ಮುಖಂಡರಾದ ಜ್ಯೋತಿಕಿರಣ ದಾಸ, ಡಾ. ಮೀನಾ ಚಂದಾವರಕರ, ಗುರುರಾಜ ದಾಸ, ಎಸ್.ಬಿ. ಸತ್ಯನಾರಾಯಣ ಇದ್ದರು.
Published on

ಬಾಗಲಕೋಟೆ: ಶಿಕ್ಷಣದಿಂದ ಮಾತ್ರ ಪ್ರತಿಯೊಂದು ಸಮಾಜ, ವ್ಯಕ್ತಿ ಅಭಿವೃದ್ಧಿ ಸಾಧ್ಯ. ಗುಣಮಟ್ಟ, ನೈತಿಕ ಶಿಕ್ಷಣ ಮಕ್ಕಳಿಗೆ ಅತ್ಯವಶ್ಯ ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು.

ಶನಿವಾರ ನವನಗರದ ಸೆಕ್ಟರ್ ನಂಬರ್ 110 ರಲ್ಲಿರುವ ವಿದ್ಯಾ ಪ್ರಸಾರಕ ಮಂಡಳದ ಅಮೃತ ಇಂಟರ್ ನ್ಯಾಷನಲ್ ಸ್ಕೂಲ್‌ನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳು ಮೊಬೈಲ್, ಟಿವಿ ಬಳಕೆಯಿಂದ ಶಿಕ್ಷಣದಲ್ಲಿ ನಿರಾಸಕ್ತಿ ಹೊಂದುತ್ತಿದ್ದಾರೆ. ಪಾಲಕರ ಜೊತೆಗೆ ಶಾಲೆಗಳಲ್ಲಿ ಶಿಕ್ಷಕರು ಈ ಬಗ್ಗೆ ಜಾಗೃತಿ ಮೂಡಿಸಿ ಓದಿನತ್ತ ಹೆಚ್ಚಿನ ಆಸಕ್ತಿ ವಹಿಸುವ ಹಾಗೇ ಮಾಡಬೇಕು. ಸಾಹಿತ್ಯ, ಸಂಸ್ಕೃತಿ, ಕ್ರೀಡಾ ಕ್ಷೇತ್ರಗಳ ಬಗ್ಗೆ ಪ್ರೋತ್ಸಾಹ ನೀಡಬೇಕು ಎಂದರು.

ವಿದ್ಯಾ ಪ್ರಸಾಕರ ಮಂಡಳ ಅಧ್ಯಕ್ಷ ಸಿ.ಎನ್. ದಾಸ, ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ್, ಮುಖಂಡರಾದ ಜ್ಯೋತಿಕಿರಣ ದಾಸ, ಡಾ. ಮೀನಾ ಚಂದಾವರಕರ, ಗುರುರಾಜ ದಾಸ, ಎಸ್.ಬಿ. ಸತ್ಯನಾರಾಯಣ, ಪ್ರದೀಪ ಪರ್ವತಿಕರ, ಆನಂದ ಬುರ್ಲಿ, ಸಂತೋಷ ಗದ್ದನಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net