ಗುಣಮಟ್ಟದ ಶಿಕ್ಷಣ ನೀಡಿ

1.1 (25)
Published on

ಯಾದಗಿರಿ: ಪ್ರಸಕ್ತ ದಿನಗಳಲ್ಲಿ ನಾವೂ ಎಲ್ಲಾ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಕಾಣುತ್ತಿದ್ದೇವೆ, ಖಾಸಗಿ ಶಿಕ್ಷಣ ಸಂಸ್ಥೆಯವರು ವಿಧ್ಯಾಥರ್ಿಗಳಿಗೆ ಶಿಸ್ತು, ಸಂಸ್ಕಾರದ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಅಂದಾಗ ಮಾತ್ರ ಬದಲಾವಣೆ ಕಾಣಲೂ ಸಾಧ್ಯ ಎಂದು ರಾಜ್ಯ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಸಲಹೆ ನೀಡಿದರು.

ನಗರದ ಹೊರವಲಯದಲ್ಲಿರುವ ಶ್ರೀ ವಿದ್ಯಾರಣ್ಯ ಅಂತರರಾಷ್ಟ್ರೀಯ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ನಿಮರ್ಾಣ ಮಾಡಿರುವ ಶಾಲಾ ಆಡಳಿತ ಕಛೇರಿ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಹಿಂದುಳಿದಿರುವ ಗಿರಿ ಜಿಲ್ಲೆಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೆಚ್ಚಾಗಿದೆ, ಮಕ್ಕಳಲ್ಲಿ ನಾನಾ ಪ್ರತಿಭೆಗಳಿರುತ್ತವೆ, ಶಿಕ್ಷಕರು ಅದನ್ನು ಗಮನಿಸಿ, ಪ್ರೋತ್ಸಾಹಿಸಿ, ಸ್ಪಧರ್ಾ ಮನೋಭಾವನೆ ಅವರಲ್ಲಿ ಮೂಡಿಸಿ, ಇದು ಅವರು ಗುರಿ ತಲುಪಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಶಾಲೆಯಲ್ಲಿ ಆಡಳಿತ ಮಂಡಳಿಯವರು ವಿಧ್ಯಾಥರ್ಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವುದು ಉತ್ತಮ ಬೆಳವಣಿಗೆ, ಪರಿಸರ ಸ್ವಚ್ಚತೆಗೆ ಇನ್ನೂ ಹೆಚ್ಚಿನ ಗಮನಹರಸಿ, ಕ್ಯಾಂಪಸ್ನಲ್ಲಿ ಹೆಚ್ಚಿನ ಸಸಿಗಳನ್ನು ಬೆಳೆಸಬೇಕು, ಇದು ಮಕ್ಕಳ ವಿಧ್ಯಾಭ್ಯಾಸದ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರನಾಥ ಚೌದ್ರಿ, ಶ್ರೀನಿವಾಸರಾವ್, ಸುಬ್ಭಾರಾವ್, ಹೇಮಂತ್ ಚೌದ್ರಿ, ಕರವೇ ಉತ್ತರ ಕನರ್ಾಟಕ ಅಧ್ಯಕ್ಷ ಶರಣು ಗದ್ದುಗೆ, ಶಿವತೇಜ, ಬಸ್ಸುಗೌಡ ಬಿಳ್ಹಾರ, ನಿರಂಜನರಡ್ಡಿ ಶೆಟ್ಟಿಹಳ್ಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net