ಗುಣಮಟ್ಟದ ಫಾರ್ಮಸಿ ಶಿಕ್ಷಣಕ್ಕೆ ಸಲಹೆ

CTD PHORMACY...
Published on

ಚಿತ್ರದುರ್ಗ:ಫಾರ್ಮಸಿ ಶಿಕ್ಷಣ ಗುಣಮಟ್ಟದಿಂದ ಕೂಡಿರಬೇಕೆಂದು ತುಮಕೂರು ಶ್ರೀದೇವಿ ಔಷಧ ವಿದ್ಯಾಲಯದ ನಿರ್ದೇಶಕ ಡಾ.ಬಿ.ಗೋಪಾಲಕೃಷ್ಣ ಹೇಳಿದರು.
ನಗರದ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಆದ್ಯ ಫಾರ್ಮಸಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫಾರ್ಮಸಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ಸೇವೆ ಅತ್ಯಂತ ಪವಿತ್ರವಾದುದು. ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರ ಪ್ರಾಣ ರಕ್ಷಣೆಯಲ್ಲಿ ವೈದ್ಯರ ಪಾತ್ರ ಪ್ರಮುಖವಾದುದು. ಹಾಗಾಗಿ ವೈದ್ಯರನ್ನು ದೇವರ ಸಮಾನವೆಂದು ಕಾಣಲಾಗುತ್ತದೆ ಎಂದರು. ಪ್ರಾಧ್ಯಾಪಕ ಡಾ.ಯೋಗೇಶ್ ಕುಮಾರ್ ಮಾತನಾಡಿ, 1912ರಲ್ಲಿ ಫಾರ್ಮಸಿ ದಿನದ ಆಚರಣೆ ಆರಂಭವಾಯಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಪಾಲಾಕ್ಷ ಮಾತನಾಡಿ, ಜಗತ್ತಿಗೆ ಫಾರ್ಮಸಿ ಕೊಡುಗೆ ಅದ್ಭುತವಾಗಿದೆ. ಫಾರ್ಮಸಿ ವಿದ್ಯಾ ರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಗಮನ ಕೊಟ್ಟು ಕೌಶಲವನ್ನು ಬೆಳೆಸಿಕೊಳ್ಳಬೇಕೆಂದು. ಪ್ರಾಧ್ಯಾಪಕ ಪ್ರೊ.ಆರ್.ಎಸ್.ರಾಜು ಮಾತ ನಾಡಿದರು. ಮಹಾಂತೇಶ್,ಡಾ.ರಾಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net