ಗುಣಮಟ್ಟದ ಜತೆಗೆ ಶೀಘ್ರ ಕಾಮಗಾರಿ ಮಾಡಿ

ydg03
Published on

ಸೈದಾಪುರ: ರಸ್ತೆ ಕಾಮಗಾರಿ ಗುಣಮಟ್ಟದ ಜತೆಗೆ ಶೀಘ್ರ ಪೂರ್ಣಗೊಳಿಸಬೇಕು ಎಂದು ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಶಾಸಕ ಶರಣಗೌಡ ಕಂದಕೂರ ತಾಕೀತು ಮಾಡಿದರು.

ಮಲ್ಹಾರ ಗ್ರಾಮದಲ್ಲಿ ೨೦೨೩-೨೪ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯ ಅನುದಾನದಲ್ಲಿ ಗುರುಮಠಕಲï ಮತಕ್ಷೇತ್ರದ ಹೆಗ್ಗಣಗೇರಾ ಗ್ರಾಮದಿಂದ ಕೌಳೂರು ಗ್ರಾಮದ ಸೀಮೆಯವರೆಗೆ ರೂ. ೫ ಕೋಟಿ ವೆಚ್ಚದ ರಸ್ತೆ ನಿರ್ಮಾಣ ಹಾಗೂ ರೂ.೧೦ ಲP್ಷÀ ರೂ. ವೆಚ್ಚದಲ್ಲಿ ಎಸ್‌ಟಿ ಕಾಲನಿಯಲ್ಲಿ ಸಿಸಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

ಯಾದಗಿರಿ ನಗರದಿಂದ ಸೈದಾಪುರಕ್ಕೆ ತೆರಳುವ ಪ್ರಯಾಣಿಕರಿಗೆ ಮಲ್ಹಾರ ಗ್ರಾಮದ ಮೂಲಕ ಸಂಪರ್ಕ ಕಲ್ಪಿಸುವ ಈ ರಸ್ತೆ ಅಂತರ ಕಡಿಮೆಯಾಗಲಿದ್ದು, ಇದರಿಂದ ತುಂಬಾ ಅನುಕೂಲವಾಗಲಿದೆ. ಮುಂಬರುವ ದಿನಗಳಲ್ಲಿ ರಾಷ್ಟಿçÃಯ ಹೆz್ದÁರಿ ೧೬೭ರಲ್ಲಿ ಸಂಚರಿಸಲು ಟೋಲï ಕಟ್ಟಬೇಕಾಗಿ ಬರಬಹುದು ಇದನ್ನು ತಪ್ಪಿಸಲು ಸಹ ಈ ರಸ್ತೆ ಸಹಕಾರಿಯಾಗಲಿದೆ ಎಂದರು.

ಸರ್ಕಾರಿ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಣ್ಣ ಕೆಲಸಗಳಿಗೂ ಜನ ನಮ್ಮನ್ನು ಭೇಟಿಯಾಗುವಂತಾಗಿದೆ. ಪಂಚಾಯಿತಿ, ಕಂದಾಯ, ಜೆಸ್ಕಾಂ, ಗ್ರಾಮೀಣ ಕುಡಿಯುವ ನೀರು ಸೇರಿ ಇನ್ನುಳಿದ ಎಲ್ಲ ಇಲಾಖೆ ಅಧಿಕಾರಿಗಳು ಜನರ ಬಳಿಗೆ ತೆರಳಿ ಜನರ ಸಮಸ್ಯೆ ಆಲಿಸಬೇಕು. ವಿಶೇಷವಾಗಿ ಗ್ರಾಪಂ ಅಧಿಕಾರಿಗಳು ಗ್ರಾಮೀಣ ನೈರ್ಮಲ್ಯ ಕಾಪಾಡಬೇಕು, ಕುಡಿಯುವ ನೀರು, ಚರಂಡಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.

ಈ ವೇಳೆ ನಿರ್ಮಿತಿ ಕೇಂದ್ರದ ಎಇಇ ಕಿರಣಕುಮಾರ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಐರೆಡ್ಡಿ, ಲೋಕೋಪಯೋಗಿ ಇಲಾಖೆಯ ಎಇಇ ಶ್ರೀಧರ, ತಾಪಂ ಇಒ ಬಸವರಾಜ ಶರಭೈ, ಮುಖಂಡರಾದ ಮಲ್ಲಣ್ಣಗೌಡ ಕೌಳೂರು, ರವಿಗೌಡ ಕಾರಡ್ಡಿ ಮಲ್ಹಾರ, ಬಸ್ಸರೆಡ್ಡಿ ಗೌಡ ಹೆಗ್ಗಣಗೇರಾ, ಗ್ರಾಪಂ ಮಾಜಿ ಅಧ್ಯP್ಷÀ ಶರಣಗೌಡ ಕಾರಡ್ಡಿ, ಲP್ಷÀ್ಮಣ ನಾಯಕ ಕೂಡ್ಲೂರ, ಸಿದ್ದಲಿಂಗರೆಡ್ಡಿ ಮಲ್ಹಾರ, ಅ¯್ಲÁವುದ್ದೀನ್ ನೀಲಹಳ್ಳಿ ಸೇರಿ ಅನೇಕರು ಇದ್ದರು. ಸಾಬರೆಡ್ಡಿ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net