ಗುಣಮಟ್ಟದ ಕೆಲಸ ನಿರ್ವಹಿಸಲು ಸೂಚನೆ

03
Published on

ಚಿಟಗುಪ್ಪ : ಜಲಜೀವನ ಮಿಷನ್ ಕಾಮಗಾರಿ ಹಲವೆಡೆ ಕಳಪೆಯಾಗಿರುವ ದೂರುಗಳು ಬರುತ್ತಿದ್ದು, ಆರಂಭದಲ್ಲೇ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಸಹ ನಿಗಾ ಇರಿಸುವಂತೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೋರಾಳ ಗ್ರಾಮದಲ್ಲಿ ಜಲಜೀವನ ಮಿಷನ್ ಕಾಮಗಾರಿಗೆ ಗುರುವಾರ ಗುದ್ದಲಿಪೂಜೆ ನೆರವೇರಿಸಿದ ಅವರು, ಜೆಜೆಎಂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಪ್ರಧಾನಿಯವರು ಪ್ರತಿ ಮನೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ರೂಪಿಸಿದ್ದಾರೆ. ಗ್ರಾಮದ ಮನೆ-ಮನೆಗೆ ಪೈಪ್‌ಲೈನ್ ಮೂಲಕ ಸಮರ್ಪಕ ನೀರು ಒದಗಿಸುವ ಕೆಲಸವಾಗಲಿದೆ. ಕಾಮಗಾರಿ ಅಚ್ಚುಕಟ್ಟಾಗಿ ನಡೆದರೆ ನೀರಿನ ಅಭಾವದ ಪ್ರಶ್ನೆ ಉದ್ಭವಿಸದು. ಗುತ್ತಿಗೆದಾರರು ಕಾಮಗಾರಿ ತ್ವರಿತ ಮತ್ತು ಗುಣಮಟ್ಟದಿಂದ ಮಾಡುವಂತೆ ಸೂಚಿಸಿದರು.

ಗ್ರಾಪಂ ಅಧ್ಯಕ್ಷ ಶ್ರೀಕಾಂತ, ಉಪಾಧ್ಯಕ್ಷೆ ಶ್ರೀದೇವಿ ಪ್ರೇಮನಾಥ, ಸದಸ್ಯರಾದ ಕುತುಬ್, ಝರಣಪ್ಪ, ಧನರಾಜ ಗಬಾಡಿ, ಜಗದೀಶ, ಶಿವರಾಜ ವಾಡೇದ, ಜೀವನ ಬುಡ್ತಾ, ಹಣಮಂತರಾವ, ಧರ್ಮವೀರ ಬಿರಾದಾರ, ಮಹೇಶ ಕುಲಕರ್ಣಿ, ಫುರ್ಖಾನ್ ಪಟೇಲï, ಭೀಮಶಾ, ಪಿಡಿಒ ಬಸವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net