ಗುಣಮಟ್ಟದ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ

27 ckm 1 web
Published on

ಚಿಕ್ಕಮಗಳೂರು: ಹೆಚ್ಚು ವರ್ಷ ಬದುಕುವುದೇ ದೊಡ್ಡದಲ್ಲ. ಹೆಚ್ಚು ಕಾಲ ಆರೋಗ್ಯವಾಗಿರುವುದೇ ಸವಾಲು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಕೃಷ್ಣಮೂರ್ತಿ ಹೇಳಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಆರೋಗ್ಯದ ಕಡೆ ಗಮನ ಹರಿಸದಿರುವುದರಿಂದ ಒತ್ತಡದಿಂದ ನಮ್ಮ ದೇಹ ಕುಗ್ಗಿ ವಯಸ್ಸಾದ ನಂತರ ಕಾಯಿಲೆಗಳು ಹಿಂಬಾಲಿಸುತ್ತವೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಗುಣಮಟ್ಟದ ಆಹಾರ ಸೇವನೆ, ಅಗತ್ಯಕ್ಕೆ ತಕ್ಕಷ್ಟು ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎನ್.ಪಂಚಾಕ್ಷರಪ್ಪ ಮಾತನಾಡಿ, ಕರೊನಾದಿಂದ ಎರಡ್ಮೂರು ವರ್ಷದಿಂದ ಸಮ್ಮಿಲನ ಸಾಧ್ಯವಾಗಿರಲಿಲ್ಲ. ನಿವೃತ್ತಿಯಾಗಿ ಹರಿದು ಹಂಚಿಹೋಗಿದ್ದ ನಾವು ವರ್ಷಕ್ಕೊಮ್ಮೆ ಕಷ್ಟ-ಸುಖಗಳ ವಿಮರ್ಶೆಗಾಗಿ ಒಂದೆಡೆ ಸೇರಬೇಕಿದೆ. ಸರ್ಕಾರದ ಸವಲತ್ತುಗಳನ್ನು ಕಾನೂನುಬದ್ಧವಾಗಿ ಪಡೆಯಲು ಈ ಸಂಘ ಸಹಕಾರಿಯಾಗಿದೆ ಎಂದು ತಿಳಿಸಿದರು.  ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳನ್ನು ತಡೆಯಲು ನಮ್ಮ ಸರಹದ್ದಿನಲ್ಲಿ ನಡೆಯುವ ಅಪರಾಧ ಅಥವಾ ಅಕ್ರಮ ಚಟುವಟಿಕೆಗಳ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅಳಿಲು ಸೇವೆ ಸಲ್ಲಿಸುವ ಮೂಲಕ ಇಲಾಖೆ ಋಣ ತೀರಿಸಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net