ಗುಣಮಟ್ಟದ ಆಹಾರ ಪದಾರ್ಥ ನೀಡಿ

11 hbd 02
Published on

ಹುಮನಾಬಾದ್: ವಸತಿನಿಲಯದ ಮಕ್ಕಳಿಗೆ ಗುಣಮಟ್ಟದ ಶಿP್ಷÀಣ ಜತೆಗೆ ಉತ್ತಮ ಆಹಾರ ಕೊಡಬೇಕು. ನಿರ್ಲಕ್ಷÈ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಎಚ್ಚರಿಸಿದರು. ಘಾಟಬೋರಾಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಬುಧವಾರ ಭೇಟಿ ನೀಡಿ ಸ್ವಚ್ಛತೆ, ಭೋಜನಾಲಯ ಕೋಣೆಯಲ್ಲಿ ಆಹಾರ ಪದಾರ್ಥ ಪರಿಶೀಲಿಸಿದ ಅವರು, ವಸತಿನಿಲಯದ ಮಕ್ಕಳನ್ನು ಸ್ವಂತ ಮಕ್ಕಳಂತೆ ತಿಳಿದು ಗುಣಮಟ್ಟದ ಆಹಾರ ಪದಾರ್ಥ ನೀಡಬೇಕು ಎಂದರು. ಪ್ರಮುಖರಾದ ಅಭಿಮನ್ಯು ನಿರಗುಡಿ, ಸಾಯಿನಾಥ ಹಂಡಗೆ, ಪವನ ಪಾಟೀಲ್, ತಾನಾಜಿ ಭೋಸಲೆ, ಸಾಗರ ರೆಡ್ಡಿ, ಆಕಾಶ ಧೂಳೆ, ಗೋವಿಂದ ಧೂಳೆ, ಬಸ್ಸು ಸ್ವಾಮಿ, ಸೋಮು ವಾಗೆ, ಹರೀಶ ಮಾನಕಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net