ಗುಣಮಟ್ಟ ಹಾಲು ಪೂರೈಕೆಗೆ ಪ್ರೋತ್ಸಾಹ ಧನ

23cmy5
Published on

ಚಿಂತಾಮಣಿ : ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಪ್ರೋತ್ಸಾಹ ಧನ ಪಡೆಯಬಹುದು ಎಂದು ಕೋಚಿಮುಲ್ ನಿರ್ದೇಶಕ ವೈ.ಬಿ.ಆಶ್ವತ್ಥ ನಾರಾಯಣಬಾಬು ತಿಳಿಸಿದರು.

ಮಸಿಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ,

ರೈತರು ಬೇಡವಾದ ವಸ್ತುಗಳಿಗೆ ಸಾವಿರಾರು ರೂ.ಹಣ ಖರ್ಚು ಮಾಡುತ್ತಾರೆ. ಆದರೆ, ಕುಟುಂಬ ಪೋಷಣೆ ಮಾಡುವ ಹಸುವಿಗೆ ವಿಮೆ ಹಣ ಕಟ್ಟಲು ಮರೆತು ಹೋಗುತ್ತಾರೆ, ಹಸುವಿಗೆ ತೊಂದರೆಯಾದಾಗ ವಿಮೆ ಜ್ಞಾಪಕಕ್ಕೆ ಬರುತ್ತೆ ಆದ್ದರಿಂದ ಪ್ರತಿಯೊಬ್ಬರು ತಪ್ಪದೆ ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ತಾಲೂಕಿನಲ್ಲಿ ಕೆಲವು ಸಂಘಟನೆಗಳು ಗುಣಮಟ್ಟದ ಹಾಲನ್ನು ನೀಡುವ ಮೂಲಕ 10 ರಿಂದ 50 ಲಕ್ಷ ರೂ.ವರೆಗೆ ಲಾಭ ಪಡೆದಿದ್ದಾರೆ. ಅವರಂತೆ ಈ ಸಂಘದವರು ಪಡೆಯುವಂತೆ ಕೋರಿದ ಅವರು 2016ರಲ್ಲಿ 1.34 ಕೋಟಿ ರೂ.ಪ್ರೋತ್ಸಾಹ ಹಣಕ್ಕೆ ಕೆಲವು ತಾಂತ್ರಿಕ ದೋಷಗಳಿಂದ ನಿಂತಿತ್ತು ಅದನ್ನು ಸರಿಪಡಿಸಿದ್ದು 1.25 ಕೋಟಿ ಹಣ ಬಿಡುಗಡೆಯಾಗಿದೆ ಕೆಲವೇ ದಿನಗಳಲ್ಲಿ ಎಲ್ಲ ಖಾತೆಗಳಿಗೆ ಜಮಾಯಾಗಲಿದೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ವಿ.ತಿಪ್ಪಾರೆಡ್ಡಿ ಮಾತನಾಡಿ, ಹಾಲು ಎಷ್ಟು ಬರುತ್ತಿದೆ ಎಂಬುದು ಮುಖ್ಯವಲ್ಲ ಎಷ್ಟು ಗುಣಮಟ್ಟದ ಹಾಲು ಬರುತ್ತಿದೆಯೆಂಬುದು ಮುಖ್ಯವಾಗಿದೆ ಎಂದು ತಿಳಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವ್ಯವಸ್ಥಾಪಕ ಡಾ.ಸುನಿಲ್‌ಸುಹೇಲ್, ಕೋಚಿಮುಲ್ ನಿರ್ದೇಶಕಿ ಸುನಂದಮ್ಮ, ಮಾಜಿ ನಿರ್ದೇಶಕ ತಿಮ್ಮಸಂದ್ರ ಎಂ.ಲಕ್ಷ್ಮಣರೆಡ್ಡಿ , ಸಂಘದ ಅಧ್ಯಕ್ಷ ಬಿ.ಬೈರಾರೆಡ್ಡಿ, ಬಿ.ಎಂ.ಸಿ ವಿಭಾಗದ ಉಪವ್ಯವಸ್ಥಾಪಕ ಬಿ.ಶಿವರಾಜ್, ರವಿ, ಎನ್.ಪ್ರಭು, ಚಿಂತಾಮಣಿ ಶಿಬಿರದ ಉಪ ವ್ಯವಸ್ಥಾಪಕ ಎ.ವಿ.ಶಂಕರರೆಡ್ಡಿ, ವಿಸ್ತಾರಣಾಧಿಕಾರಿಗಳಾದ ಎಂ.ಎಸ್.ನಾರಾಯಣಸ್ವಾಮಿ, ಎನ್.ಶಂಕರ್, ಪಿ.ವೆಂಕಟರವಣ, ಕೆ.ನಾರಾಯಣಸ್ವಾಮಿ, ವೆಂಕಟೇಶ್‌ಮೂರ್ತಿ ಮತ್ತಿತರರು ಉಪಸ್ಥಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net