ಗುಣಕಿ‌ ಶಾಲೆಗೆ ಲೋಕಾಯುಕ್ತ ಸಿಪಿಐ ಭೇಟಿ

1639901342786
Published on

ವಿಜಯಪುರ: ವಿಜಯಪುರ ತಾಲೂಕಿನ ಗುಣಕಿ ಗ್ರಾಮದಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಲೋಕಾಯುಕ್ತ ಸಿಪಿಐ ಆನಂದ ಠಕ್ಕಣ್ಣವರ ಭೇಟಿ ನೀಡಿದ್ರು. 1ರಿಂದ 8ನೇ ತರಗತಿಲ್ಲಿ ಓದುತ್ತಿರುವ 295 ವಿದ್ಯಾರ್ಥಿಗಳಿಗೆ ಕೋವಿಡ್ 19ನ ನಿಯಮಾವಳಿಗಳು ಪಾಲನೆ ಆಗ್ತಿವೆಯಾ ಎಂದು ಪರಿಶೀಲನೆ ನಡೆಸಿದ್ರು. ಅಲ್ಲದೆ ವಿದ್ಯಾರ್ಥಿಗಳಿಗೆ ಕೋವಿಡ್ ಬಾರದಂತೆ ಮುಂಜಾಗೃತೆ ವಹಿಸುವುದು ಹೇಗೆ ಎಂದು ತಿಳಿಹೇಳಿದ್ರು. ನಲಿ-ಕಲಿ ತರಗತಿಯಲ್ಲಿನ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆದ ಅವರು ಮಕ್ಕಳ‌ ಪ್ರತಿಭೆಯನ್ನು ಅವಲೋಕಿಸಿದ್ರು. ಬಳಿಕ ಮಕ್ಕಳೊಂದಿಗೆ ಸೇರಿ ಸಿಪಿಐ ಆನಂದ ಠಕ್ಕಣ್ಣವರ ಸಹ ಮದ್ಯಾಹ್ನದ ಬಿಸಿಯೂಟ ಸೇವಿಸಿದ್ರು. ಗುಣಕಿ ಮಾದರಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಅಹಾರ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು. ಶಾಲೆಯಲ್ಲಿನ ಪರಿಸರದ ವಾತಾವರಣ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕಂಡು ಖುಶಿಯಾದ್ರು. ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ರೇವಣಸಿದ್ದ ಪಾದಗಟ್ಟಿ ಸೇರಿದಂತೆ ಎಂಟು ಜನ ಶಿಕ್ಷಕರು ಹಾಗೂ ಎಸ್ ಡಿ ಎಂಸಿ ಅಧ್ಯಕ್ಷ ಹನುಮಂತರಾಯ ಪಾಟೀಲ್ ಮತ್ತು ಎಸ್ ಡಿ ಎಂ ಸಿ ಸದಸ್ಯರ ಶ್ರಮದಿಂದ ಮಕ್ಕಳು ಚೆನ್ನಾಗಿ ಕಲಿಯುತ್ತಿದ್ದಾರೆ. ಜೊತೆಗೆ ಮಕ್ಕಳ ಪಾಲಕರು ಹಾಗೂ ಗ್ರಾಮದ ಜನ್ರ ಸಹಕಾರದಿಂದ ಸರಕಾರಿ ಶಾಲೆ ಮಾದರಿ ಶಾಲೆ ಆಗಿದೆ ಎಂದು ಲೋಕಾಯುಕ್ತ ಅಧಿಕಾರಿ ಹೇಳಿದ್ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net