ಗುಡ್ಡಾಪುರ ದಾನಮ್ಮದೇವಿ ಜಾತ್ರೆ 18ರಿಂದ

12Athani2
Published on

ಅಥಣಿ: ಸಮೀಪದ ಗುಡ್ಡಾಪುರ ದಾನಮ್ಮ ದೇವಿಯ ಕಾರ್ತಿಕಮಾಸದ ಜಾತ್ರಾ ಮಹೋತ್ಸವ ನ.18ರಿಂದ 20ರ ವರೆಗೆ ಜರುಗಲಿದೆ. ನ.18ರಂದು ಬೆಳಗ್ಗೆ 11 ಗಂಟೆಗೆ ಮಹಾಪ್ರಸಾದ ದಾಸೋಹ ಸೇವೆಯ ಪೂಜೆ ಕಾರ್ಯಕ್ರಮ ಜರುಗಲಿದೆ.

ಗುಡ್ಡಾಪುರ ಹಿರೇಮಠ ಸಂಸ್ಥಾನದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಮತ್ತು ಗೌಡಗಾಂವದ ಡಾ.ಜಯಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನ.19ರಂದು ಸಂಜೆ 7ರಿಂದ 9 ಗಂಟೆಯವೆರಗೆ ಕಾರ್ತಿಕ ದೀಪೋತ್ಸವ ಪೂಜೆ ಮತ್ತು ದಾನಮ್ಮ ದೇವಿ ಪಲ್ಲಕ್ಕಿ ಉತ್ಸವವು ನಡೆಯಲಿದೆ.

ಗುರುಪಾದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಜತ್ತ ಶಾಸಕ ಗೋಪಿಚಂದ ಪಡಳಕರ, ವಿಜಯಕುಮಾರ ದೇಶಮುಖ ಆಗಮಿಸುವರು. ನ.20ರಂದು ಸಂಜೆ 6ರಿಂದ ದೇವಿ ರಥೋತ್ಸವ ಜರುಗಲಿದೆ.

ಗುರುಪಾದ ಸ್ವಾಮೀಜಿ ಮತ್ತು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಪಾಲ್ಗೊಳ್ಳುವರು. ಪ್ರತಿನಿತ್ಯ ಪೂಜೆ, ಪ್ರಾರ್ಥನೆ, ಶಿವಚಿಂತನೆ, ಭಜನೆ, ಪ್ರವಚನ ಮತ್ತಿತರರ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ಟ್ರಸ್ಟ್ ಕಮಿಟಿ ನಿರ್ದೇಶಕ ಶಂಭುಲಿಂಗ ಮಮದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net