ಗುಡ್ಡಗಾಡು ಓಟದ ಸ್ಪರ್ಧೆ 23ರಂದು

Published on

ಹುಬ್ಬಳ್ಳಿ: ರಾಷ್ಟ್ರೀಯ ಯುವ ದಿನ ಹಾಗೂ ಟ್ರೇನ್ ದ ಟ್ರೇನರ್ಸ್ ನಿಮಿತ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ರಾಜಯೋಗ ಎಜುಕೇಷನ್ ಆ್ಯಂಡ್ ರಿಸರ್ಚ್ ಫೌಂಡೇಷನ್‌ನ ಬ್ರಹ್ಮಕುಮಾರೀಸ್ ಸ್ಪೋರ್ಟ್ಸ್ ವಿಂಗ್ ವತಿಯಿಂದ ನಗರದಲ್ಲಿ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಜ. 23ರಂದು ಏರ್ಪಡಿಸಲಾಗಿದೆ.

12ರಿಂದ 16ನೇ ವಯಸ್ಸಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ 4 ಕಿ.ಮೀ. ಸ್ಪರ್ಧೆ ಇದೆ. ವಿದ್ಯಾನಗರದ ಬಿವಿಬಿ ಕಾಲೇಜ್ ಗೇಟ್‌ನಿಂದ ಬೆಳಗ್ಗೆ 7ಕ್ಕೆ ಪ್ರಾರಂಭವಾಗಿ ಉಣಕಲ್, ಭೈರಿದೇವರಕೊಪ್ಪ ಮಾರ್ಗವಾಗಿ ಗಾಮನಗಟ್ಟಿ ರಸ್ತೆಯಲ್ಲಿನ ಭಗವದ್ಗಿತಾ ಜ್ಞಾನಲೋಕ ಮ್ಯೂಸಿಯಂ ಬಳಿ ಕೊನೆಗೊಳ್ಳಲಿದೆ.

9ರಿಂದ 12 ವಯಸ್ಸಿನ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ 2.ಕಿ.ಮೀ. ಓಟದ ಸ್ಪರ್ಧೆ ಇದೆ. ಈ ಸ್ಪರ್ಧೆಯು ನವೀನ್ ಹೋಟೆಲ್ ಪಕ್ಕದ ಪೆಟ್ರೋಲ್ ಬಂಕ್ ಆವರಣದಿಂದ ಆರಂಭವಾಗಿ ಶಿವಾನಂದ ಮಠದ ಮುಂದೆ ಸಾಗಿ ಗಾಮನಗಟ್ಟಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ ಬಳಿ ಮುಕ್ತಾಯವಾಗಲಿದೆ.

ನಂತರ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತರು ಜೆ.ಸಿ. ನಗರದ ಬ್ರಹ್ಮಕುಮಾರಿ ಆಶ್ರಮಕ್ಕೆ ಬಂದು ಜ. 17ರೊಳಗೆ ಹೆಸರು ನೋಂದಾಯಿಸಬೇಕು. 21ರಂದು ಬೆಳಗ್ಗೆ 10ಕ್ಕೆ ಚೆಸ್ಟ್ ನಂಬರ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net