ಗುಡ್ಡಗಾಡು ಓಟಕ್ಕೆ ಗಡಿಜಿಲ್ಲೆ ಕ್ರೀಡಾಪಟುಗಳು

17rajesh5
Published on

ಚಾಮರಾಜನಗರ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ನ.18 ರಿಂದ 20 ರವರೆಗೆ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಗುಡ್ಡಗಾಡು ಓಟ (ಕ್ರಾಸ್‌ಕಂಟ್ರಿ) ಸ್ಪರ್ಧೆಯಲ್ಲಿ ಚಾ.ನಗರ ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಚಾ.ನಗರ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ಜಿ.ಸೌಂದರ್ಯ, ಕೊಳ್ಳೇಗಾಲ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿನಿ ಎಂ.ಕೆ.ಪೂಜಾ, ವಾಸವಿ ಪ್ರಥಮದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ಎಂ.ಕೋಮಲಾ ಮತ್ತು ಎಂ.ಚೈತ್ರಾ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ವಿ.ಎಂ.ಕಾವ್ಯ ಹಾಗೂ ವಿಶ್ವವಿದ್ಯಾಲಯದ ಪ್ರಥಮ ಎಂಎ ವಿಭಾಗದ ವಿದ್ಯಾರ್ಥಿನಿ ಎ.ಎಸ್.ನಿಶ್ಚಿತಾ ಮಹಿಳಾ ತಂಡದ ನಾಯಕಿಯಾಗಿ ಭಾಗವಹಿಸಲಿದ್ದಾರೆ.

ಪುರುಷರ ತಂಡದಿಂದ ಕೊಳ್ಳೇಗಾಲದ ಶ್ರೀಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎ ವಿಭಾಗದ ವಿದ್ಯಾರ್ಥಿಗಳಾದ ಬಿ.ಹರ್ಷ, ಎಂ.ದೊಡ್ಡರಾಜು, ಜೆ.ಮಹೇಶ್, ದ್ವಿತೀಯ ಬಿಎ ವಿದ್ಯಾರ್ಥಿ ಎಂ.ರೋಹಿತ್‌ರಾಜ್, ಪ್ರಥಮ ಬಿಬಿಎ ವಿದ್ಯಾರ್ಥಿ ಎಂ.ಗುರುಮೂರ್ತಿ ಹಾಗೂ ವಾಸವಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಧ್ರುವ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಮಹಿಳಾ ತಂಡದ ತರಬೇತುದಾರರಾಗಿ ಜೆಎಸ್‌ಎಸ್ ಮಹಿಳಾ ಕಾಲೇಜಿನ ಎಸ್.ಉಮೇಶ್ ಮತ್ತು ಪುರುಷರ ತಂಡದ ತರಬೇತುದಾರರಾಗಿ ಕೊಳ್ಳೇಗಾಲದ ಶ್ರೀಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಜಯಶಂಕರ ಎರಡು ತಂಡಗಳ ಜತೆಗೆ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಹೊಸದಾಗಿ ಪ್ರಾರಂಭವಾದ 7 ವಿಶ್ವವಿದ್ಯಾಲಯಗಳ ಪೈಕಿ ಚಾಮರಾಜನಗರ ವಿಶ್ವವಿದ್ಯಾಲಯದಿಂದ ಹಲವಾರು ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು. ನೂತನ ವಿಶ್ವವಿದ್ಯಾಲಯದಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರೆತಂತಾಗಿದೆ.

ದೇಶದ ವಿವಿದೆಡೆ 9 ತಂಡ ಸ್ಪರ್ಧೆ:

ದೇಶದ ವಿವಿಧ ರಾಜ್ಯಗಳಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಹಲವಾರು ಕ್ರೀಡಾಕೂಟಗಳು ನಡೆಯಲಿದ್ದು, ಮುಂದಿನ ದಿನಗಳಲ್ಲಿ ಸುಮಾರು 9 ತಂಡಗಳು ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ. ಕೇರಳಾ ರಾಜ್ಯದ ತಿರುವನಂತಪುರಂನ ಕೇರಳಾ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ವಾಲಿಬಾಲ್ ಕ್ರೀಡಾಕೂಟ, ತಮಿಳಿನಾಡಿನ ತಿರುವವೂರಿನಲ್ಲಿ ನಡೆಯಲಿರುವ ಖೋಖೋ ಕ್ರೀಡಾಕೂಟ, ತೆಲಂಗಾಣದಲ್ಲಿ ನಡೆಯಲಿರುವ ಸ್‌ಟಾಬಾಲ್ ಕ್ರೀಡಾಕೂಟ, ಒಡಿಸ್ಸಾ ರಾಜ್ಯದಲ್ಲಿ ನಡೆಯಲಿರುವ ಅಥ್ಲೇಟಿಕ್ಸ್ ಹಾಗೂ ತಮಿಳುನಾಡಿನ ಚೆನ್ನೈನಲ್ಲಿ ನಡೆಯಲಿರುವ ಬಾಲ್ ಬ್ಯಾಡ್ಮಿಟನ್ ಕ್ರೀಡಾಕೂಟದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ.

ಜಮ್ಮುವಿನಲ್ಲಿ ನಡೆದಿತ್ತು ೆನ್ಸಿಂಗ್:

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಜಮ್ಮು ವಿಶ್ವವಿದ್ಯಾಲಯದಲ್ಲಿ ನ.6 ರಿಂ 10 ರವರೆಗೆ ನಡೆದಿದ್ದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟದ ೆನ್ಸಿಂಗ್ ಸ್ಪರ್ಧೆಯಲ್ಲೂ ಕೂಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿಗಳಾದ ಎಂ.ಜಯಸೂರ್ಯ, ಎಸ್.ನಿಂಗರಾಜು, ಮನುನಾಯಕ ಮತ್ತು ಪ್ರಥಮ ಬಿಎ ವಿದ್ಯಾರ್ಥಿಗಳಾದ ಎಸ್.ರಾಜು, ಎಂ.ಪಿ.ನಂದು, ಜೆ.ಯಶವಂತ್‌ನಾಯಕ ಸ್ಪರ್ಧೆಯಲ್ಲಿ ಭಾಗವಹಿದ್ದರು. ಇಬ್ಬರು ಸೆಮಿಪೈನಲ್‌ನಲ್ಲಿ ಸೋಲು ಅನುಭವಿಸಿದರು ಕೂಡ ಮೊದಲ ಬಾರಿಗೆ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ಮೆಚ್ಚುಗೆ ಗಳಿಸಿದ್ದರು.

ಇದೇ ಮೊದಲ ಬಾರಿಗೆ ಚಾಮರಾಜನಗರ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳನ್ನು ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ ಕಳುಹಿಸಲಾಗುತ್ತಿದೆ. ಸರ್ಕಾರದಿಂದ ಯಾವುದೇ ಅನುದಾನ ಬರದಿದ್ದರೂ ಕೂಡ, ಈ ಭಾಗದ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದ ಅನುಕೂಲ ಕಲ್ಪಿಸಿದೆ. ವಿಶ್ವಕ್ರೀಡಾಪಟುಗಳಿಗೆ ಶುಭವಾಗಲಿ.

-ಡಾ.ವಿ.ಜಿ.ಸಿದ್ದರಾಜು, ಪಿಎಂಇಬಿ ನಿರ್ದೇಶಕ, ವಿಶ್ವವಿದ್ಯಾಲಯ.

ಚಾಮರಾಜನಗರ ವಿಶ್ವವಿದ್ಯಾಲಯದಿಂದ ಇದೇ ಮೊದಲ ಬಾರಿಗೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ವಿಶ್ವವಿದ್ಯಾಲಯದಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವಲ್ಲಿ ವಿವಿ ದೈಹಿಕ ಶಿಕ್ಷಣ ವಿಭಾಗ ಕಾರ್ಯಪ್ರವೃತ್ತವಾಗಿದೆ.

-ಡಾ.ಶಾಂತರಾಜು, ನಿರ್ದೇಶಕ, ದೈಹಿಕ ಶಿಕ್ಷಣ ವಿಭಾಗ, ವಿವಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net