ಗುಡುಗು, ಸಿಡಿಲು ಸಹಿತ ಭಾರಿ ಮಳೆ

22MDG4
Published on

ಮುಂಡರಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗುರುವಾರ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಮಳೆಯಿಂದಾಗಿ ಹಲವು ಮನೆಗಳ ಗೋಡೆ, ಮೇಲ್ಛಾವಣಿ ಕುಸಿದಿವೆ. ಕೊರ್ಲಹಳ್ಳಿ, ಗಂಗಾಪೂರ, ಶಿಂಗಟಾಲೂರ, ಹಮ್ಮಿಗಿ, ಬಿದರಳ್ಳಿ ಮೊದಲಾದ ಕಡೆ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ.

ತಾಲೂಕಿನಾದ್ಯಂತ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು, ಜನರು ಪರದಾಡುವಂತಾಗಿದೆ. ನಿರಂತರ ಮಳೆಯಿಂದ ಭತ್ತದ ಬೆಳೆಗೆ ಹಾನಿಯಾಗುತ್ತಿದ್ದು ರೈತರು ಸಂಕಷ್ಟ ಪಡುವಂತಾಗಿದೆ. ಉಳ್ಳಾಗಡ್ಡಿ, ಶೇಂಗಾ, ಕಡಲೆ, ಗೋಧಿ, ಸೂರ್ಯಕಾಂತಿ, ಗೋವಿನಜೋಳ ಬೆಳೆಗಳು ಹಾಳಾಗುವ ಹಂತಕ್ಕೆ ತಲುಪಿವೆ. ಈಗಾಗಲೇ ಹಲವು ಕಡೆಗಳಲ್ಲಿ ವಿವಿಧ ಬೆಳೆ ಹಾಳಾಗಿವೆ. ನಿರಂತರ ಮಳೆಗೆ ಗೋವಿನಜೋಳ ಬೆಳೆಯ ತೆನೆಯಲ್ಲಿ ಮೊಳಕೆ ಒಡೆಯುತ್ತಿವೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net