ಗುಡುಗು, ಮಿಂಚಿನೊಂದಿಗೆ ಭಾರಿ ಮಳೆ

21-88
ಬೆಳಗಾವಿ ನಗರದ ಚನ್ನಮ್ಮ ವೃತ್ತದ ಬಳಿ ರಸ್ತೆಯಲ್ಲಿ ಸಂಗ್ರಹಗೊಂಡ ನೀರಿನಲ್ಲಿ ವಾಹನ ಸಂಚರಿಸುತ್ತಿರುವುದು.
Published on

ಬೆಳಗಾವಿ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆಯ ಅಬ್ಬರ ಮುಂದುವರಿದ್ದು, ಗುರುವಾರ ಸಂಜೆ ಧಾರಾಕಾರವಾಗಿ ಸುರಿಯಿತು.
ಬೆಳಗ್ಗೆ, ಮಧ್ಯಾಹ್ನ ಬಿಡುವು ನೀಡಿದ್ದ ಮಳೆಯು ರಾತ್ರಿ ಗುಡುಗು, ಮಿಂಚಿನೊಂದಿಗೆ ಜೋರಾಗಿ ಸುರಿಯಿತು. ನೋಡ ನೋಡುತ್ತಿದ್ದಂತೆ ರಸ್ತೆ ಹಾಗೂ ಗಟಾರುಗಳಲ್ಲಿ ನೀರು ತುಂಬಿ ಹರಿದವು.

ಸುಮಾರು 1 ಗಂಟೆ ಕಾಲ ಮಳೆ ಸುರಿದಿದ್ದರಿಂದ ಗಟಾರಗಳು ಹಳ್ಳದಂತೆ ಹರಿದವು. ನಗರದ ರಸ್ತೆಗಳ ಮೇಲೆ ನೀರು ಸಂಗ್ರಹಗೊಂಡು ಸಂಚಾರಕ್ಕೆ ತೊಂದರೆಯಾಯಿತು. ಮಳೆಯ ಆರ್ಭಟಕ್ಕೆ ಹಳೇ ಪಿ.ಬಿ. ರಸ್ತೆ, ನ್ಯೂ ಗಾಂಧಿನಗರ, ಬೆಂಡಿ ಬಜಾರ್, ಖಡೇ ಬಜಾರ್, ನಗರದ ಹೊರವಲಯದ ಯಡಿಯೂರಪ್ಪ ಮಾರ್ಗ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರವಿವಾರ ಪೇಟೆ, ಚನ್ನಮ್ಮ ವೃತ್ತ ಸೇರಿ ಬಹುತೇಕ ಪ್ರದೇಶಗಳಲ್ಲಿ ಮೊಣಕಾಲೆತ್ತರ ನೀರು ಸಂಗ್ರಹಗೊಂಡಿತ್ತು. ೆರ್ಟ್ ರಸ್ತೆ, ಪಾಟೀಲ ಗಲ್ಲಿ ಹಳೇ ಪಿ.ಬಿ. ರಸ್ತೆಯ ಗುಂಡಿಗಳಲ್ಲಿ ನೀರು ಸಂಗ್ರಹಗೊಂಡು, ಸಂಚಾರಕ್ಕೆ ಅಡಚಣೆಯಾಯಿತು. ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡಬೇಕಾಯಿತು. ಜಿಲ್ಲೆಯಲ್ಲಿ ಹಲವು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net