

ಚಿತ್ರದುರ್ಗ: ಪಿಳ್ಳೆಕೇರನಹಳ್ಳಿ ಜಂಟಿ ಖಾತೆಯ ದಲಿತರ ಖಾಸಗಿ ಜಮೀನೊಂದರಲ್ಲಿ ಉಳ್ಳವರ ಕುಮ್ಮಕ್ಕಿನಿಂದ ಕೆಲವರು ಅತಿಕ್ರಮ ಪ್ರವೇಶಿಸಿ, ಗುಡಿಸಲು ನಿರ್ಮಿಸಿಕೊಂಡಿದ್ದು, ತೆರವುಗೊಳಿಸುವಂತೆ ಆಗ್ರಹಿಸಿ ಮಹಾನಾಯಕ ದಲಿತ ಸೇನೆ ಕಾರ್ಯಕರ್ತರು ಶುಕ್ರವಾರ ಧರಣಿ ಆರಂಭಿಸಿದರು.
ಗೋನೂರು ಗ್ರಾಮದ ಏಳೆಂಟು ಮಂದಿಯ ಹೆಸರಿನ ಜಂಟಿ ಖಾತೆಯಲ್ಲಿರುವ 4 ಎಕರೆ 28 ಗುಂಟೆ ಜಮೀನಿನಲ್ಲಿ ಕೆಲ ಪ್ರಭಾವಿಗಳು ಗುಡಿಸಲು ಹಾಕಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಿಲ್ಲ. ಕೂಡಲೇ ನೊಂದವರಿಗೆ ನ್ಯಾಯ ಒದಗಿಸಬೇಕು ಎಂದು ಗೃಹ ಸಚಿವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಸೇನೆ ಅಧ್ಯಕ್ಷ ಮಂಜುನಾಥ್ ಎ. ತಾಳಿಕೆರೆ, ಪದಾಧಿಕಾರಿಗಳಾದ ಕೆ.ಪೆನ್ನೇಶ್, ಆರ್.ಪ್ರದೀಪ್, ಹೊಳೆಯಪ್ಪ ಕೆ. ಸಾಕ್ಯ, ಜಿ.ವೀಣಾ, ನಗ್ಮಾ, ತೃತೀಯ ಲಿಂಗಿಗಳು ಇತರರಿದ್ದರು.