

ಕಲಬುರಗಿ: ಲವ್ ಜಿಹಾದ್ನಂತೆ ಕಲಬುರಗಿ ಜಿಲ್ಲೆ ಸೇರಿ ಉತ್ತರ ಕನರ್ಾಟಕ ಹಲವು ಜಿಲ್ಲೆಗಳಲ್ಲಿ ಸಾಮಾಜಿಕ ಪಿಡುಗಿನಿಂತೆ ಬಾಧಿಸುತ್ತಿರುವ ಗುಜ್ಜರ್ ಕಿ ಶಾದಿಗಳಿಗೆ ಕಡಿವಾಣ ಹಾಕಲು ಕಾಯ್ದೆ ರೂಪಿಸಿ ಜಾರಿಗೊಳಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಆಗ್ರಹಿಸಿದರು.
ನಗರದ ಕನ್ನಡ ಭವನದಲ್ಲಿ ಕಸಾಪ ಪದಾಧಿಕಾರಿಗಳ ಜತೆಗೂಡಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲವ್ ಜಿಹಾದ್ ಕಾನೂನು ರೂಪಿಸಲು ಸರ್ಕಾರ ಮುಂದಾಗಿರುವುದರ ಕುರಿತು ಜಿಲ್ಲೆಯ ಸಾಹಿತಿಗಳೊಂದಿಗೆ ಮತ್ತು ಕಾರ್ಯಕಾರಿಯಲ್ಲಿ ಚರ್ಚೆ ನಡೆಸಿದ್ದು, ಕ್ರಮವನ್ನು ಸ್ವಾಗತಿಸುತ್ತೇವೆ. ಅದೇ ಮಾದರಿಯಲ್ಲಿ ಗುಜ್ಜರ್ ಕಿ ಶಾದಿ ತಡೆಯಲು ಕಠಿಣ ಕ್ರಮ ಅಗತ್ಯ ಎಂದರು.
ಬಡವರನ್ನೇ ಗುರಿಯಾಗಿಸಿಕೊಂಡು ಅವರ ಹೆಣ್ಣು ಮಕ್ಕಳನ್ನು ಮಧ್ಯವರ್ತಿಗಳ ಮೂಲಕ ಗುಜರಾತ್, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶದ ಇನ್ನಿತರ ರಾಜ್ಯಗಳ ಶ್ರೀಮಂತರು ಮದುವೆ ಮಾಡಿಕೊಂಡು ಹೋಗುತ್ತಿದ್ದಾರೆ. ನಂತರ ಅವರನ್ನು ಮನೆಗೆಲಸಕ್ಕೆ, ಇಲ್ಲವೇ ವೇಶ್ಯಾವಾಟಿಕೆಗೆ ತಳ್ಳುವ ಪ್ರಕಣಗಳು ವರದಿಯಾಗಿವೆ, ಇದನ್ನು ಮಾನವ ಕಳ್ಳ ಸಾಗಣೆ ಎಂದು ಪರಿಗಣಿಸಬೇಕು. ಈ ಕುರಿತು ಕಸಾಪ ಮೊದಲಿನಿಂದಲೂ ಧ್ವನಿ ಎತ್ತುತ್ತಿದೆ. ಚಿಂಚೋಳಿಯಲ್ಲಿ ನಡೆದ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಸಹ ಅಂಗೀಕರಿಸಲಾಗಿತ್ತು ಎಂದು ಹೇಳಿದರು.
ಗುಜ್ಜರ್ ಕಿ ಶಾದಿ ನಿಯಂತ್ರಿಸಲು ಕಾಯ್ದೆ ರೂಪಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಬೆಳಗಾವಿ, ರಾಯಚೂರು, ಬೀದರ್, ವಿಜಯಪುಯರ ಇನ್ನಿತರ ಜಿಲ್ಲೆಗಳಲ್ಲಿ ನಡೆಯುತ್ತಲೇ ಇವೆ. ಬಡ ಕುಟುಂಬದವರ ಹೆಣ್ಣ ಮಕ್ಕಳನ್ನು ಮಧ್ಯವರ್ತಿಗಳು ಪಾಲಕರಿಗೆ ಹಣದ ಆಮಿಷೆ ತೋರಿಸಿ ಮದುವೆ ಮಾಡುವಂತೆ ಮಾಡುತ್ತಾರೆ. ನಂತರ ಪೋಷಕರು ಒಂದು ದಿನವು ಮಗಳ ಬಳಿಗೆ ಹೋಗಿ ನೋಡಿದ ಉದಾಹರಣೆಗಳಿಲ್ಲ. ಆದರೆ, ಅಧಿಕಾರಿಗಳು ಗಮನಕ್ಕೆ ಬಂದಾಗ ಬಾಲ್ಯವಿವಾಹ ಕಾಯ್ದೆಯಡಿ ಕೇಸ್ ದಾಖಲಿಸಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಸಾಪ ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಡಾ.ವಿಜಯಕುಮಾರ ಪರೂತೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಕೆ.ಎಸ್.ಬಂಧು, ಅಂಬಾಜಿ ಕೌಲಗಿ, ಸುರೇಶ ಹತ್ತಿ, ದಕ್ಷಿಣ ವಲಯ ಗೌರವ ಕಾರ್ಯದರ್ಶಿ ನಂದ ಆನಂದೂರಕರ ಸುದ್ದಿಗೋಷ್ಠಿಯಲ್ಲಿದ್ದರು.